ಕಾರವಾರ: ಬಾಲಕಿ ಮೇಲೆ ವೃದ್ದನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಮುಂಡಗೋಡ ತಾಲೂಕಿನ ಓರಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಓರಲಗಿ ಗ್ರಾಮದ ವೃದ್ದ (60) ಅಪ್ರಾಪ್ತೆಯನ್ನು ತನ್ನ ಮನೆಗೆ ಹಾಗೂ ಬೋರಿನ ಹೊಲಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆ ಸೆಪ್ಟೆಂಬರ್ 16 ರಂದೇ ನಡೆದಿದೆ. ಮಂಗಳವಾರ ವಿಷಯ ಬೆಳಕಿಗೆ ಬಂದಿದೆ.
ತಕ್ಷಣ ಬಾಲಕಿ ತಾಯಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿ.ಎಸ್.ಐ ಬಸವರಾಜ ಮಬನೂರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಿಗಮ ಮಂಡಳಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲು : ಸರ್ಕಾರಕ್ಕೆ ಕಡೆಯ ಅವಕಾಶ ನೀಡಿದ ಹೈಕೋರ್ಟ್