ಶಿರಸಿ: ಸಚಿವ ಸಂಪುಟ ವಿಸ್ತರಣೆ ನಿರಂತರ ಪ್ರಕ್ರಿಯೆ, ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುವವರಿಗೆ ಮುಖ್ಯಮಂತ್ರಿ ಖಾತೆ ನೀಡಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಸಕ್ಕರೆ ಖಾತೆ ಹಿಂಪಡೆದಿದ್ದಕ್ಕೆ ನನಗೇನು ಬೇಸರವಿಲ್ಲ. ಖಾತೆ ನೀಡುವುದು, ಹಿಂಪಡೆಯುವುದು ಮುಖ್ಯಮಂತ್ರಿ ವಿವೇಚನಕ್ಕೆ ಬಿಟ್ಟ ವಿಚಾರ. ಸಂಪುಟದಲ್ಲಿರುವ ಯಾವ ಸಚಿವರಿಗೂ ಅಸಮಾಧಾನವಿಲ್ಲ, ಸಚಿವ ಸ್ಥಾನ ಸಿಗದಿದ್ದವರಲ್ಲೂ ಬೇಸರವಿಲ್ಲ. ಮುಖ್ಯಮಂತ್ರಿ ಜತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ, ಸಂಪುಟ ವಿಸ್ತರಣೆ ಎಂಬುದು ಸಿಎಂ ಪರಮಾಧಿಕಾರ ಎಂದರು.
ಇನ್ನು ಯತ್ನಾಳ್ ಹಾಗೂ ವಿಶ್ವನಾಥ ಅವರ ಹೇಳಿಕೆಗೆ ಪ್ರತಿಕ್ರಯಿಸಿದ್ದು, ಈ ಕುರಿತು ಹೈಕಮಾಂಡ್ ವಿಚಾರಣೆ ನಡೆಸಲಿದೆ ಎಂದು ಸ್ಪಷ್ಟನೆ ನೀಡಿದರು.