ಕಾರವಾರ: ದಂಪತಿಗಳಿಬ್ಬರು ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ವೇಳೆ ಗುಂಡು ತಗುಲಿ ಮಹಿಳೆ ಗಾಯಗೊಂಡ ಘಟನೆ ಕಾರವಾರ ತಾಲೂಕಿನ ಗೋಯರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.
ಗೋಯರದ ರಸಿಕಾ ದೇಸಾಯಿ ಗಾಯಗೊಂಡ ಮಹಿಳೆ. ಈಕೆ ತನ್ನ ಗಂಡನ ಜೊತೆಗೆ ಒಣ ಕಟ್ಟಿಗೆ ತರಲು ಕಾಡಿಗೆ ತೆರಳಿದ್ದರು. ಈ ವೇಳೆ, ಎಲ್ಲಿಂದಲೋ ಬಂದ ಗುಂಡು ಕೈಗೆ ತಗುಲಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ಆಕೆಯನ್ನು ಹೊತ್ತುಕೊಂಡು ಬಂದ ಪತಿ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಓದಿ - ಒಡೆದ ಗರ್ಭಕೋಶದ ಟ್ಯೂಬಲ್: ಭಟ್ಕಳ ವೈದ್ಯರಿಂದ ಮಹಿಳೆಗೆ ಶಸ್ತ್ರಚಿಕಿತ್ಸೆ
ಬೇಟೆಗಾರರು ಹಾರಿಸಿದ್ದ ಗುಂಡು ತಪ್ಪಿ ಮಹಿಳೆಯ ಕೈಗೆ ತಗುಲಿರಬಹುದು ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್ ಕೈಗೆ ತಗುಲಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.