ETV Bharat / state

ಕಾರವಾರ ನಗರಸಭೆ ಬಿಜೆಪಿ ತೆಕ್ಕೆಗೆ: ಜೆಡಿಎಸ್​​​ನೊಂದಿಗೆ ಪಕ್ಷೇತರರ ಬೇಷರತ್ ಬೆಂಬಲ - ಬಿಜೆಪಿಗೆ ಬೇಷರತ್ ಬೆಂಬಲ

ಕಾರವಾರ ನಗರಸಭೆ ಆಡಳಿತ ಬಿಜೆಪಿ ಕೈಸೇರುವ ಕುರಿತು ಸ್ಪಷ್ಟ ಚಿತ್ರಣ ಕಂಡು ಬಂದಿದೆ. 11 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಬಹುಮತಕ್ಕಾಗಿ ಪಕ್ಷೇತರರು ಹಾಗೂ ಜೆಡಿಎಸ್ ಸದಸ್ಯರು​​​​ ಬೆಂಬಲ ಸೂಚಿಸಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಲಿದೆ.

bjp-succeed-take-administration-of-karwar-municipality
ಕಾರವಾರ ನಗರಸಭೆ ಬಿಜೆಪಿ ತೆಕ್ಕೆಗೆ
author img

By

Published : Oct 30, 2020, 6:11 PM IST

ಕಾರವಾರ (ಉ.ಕ): ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ‌ ಮೀಸಲಾತಿ ಪ್ರಕಟವಾದ ಬೆನ್ನಲ್ಲೆ ಗರಿಗೆದರಿದ್ದ ಕಾರವಾರ ನಗರಸಭೆ ಅಖಾಡ ಇದೀಗ ಅಂತಿಮ‌ ಹಂತ ತಲುಪಿದೆ. ಸಮಾನ ಸದಸ್ಯರನ್ನು ಹೊಂದಿದ್ದ ಕಾರಣ ಬಿಜೆಪಿ ಹಾಗೂ ಕಾಂಗ್ರೆಸ್ ಅತಂತ್ರ ಸ್ಥಿತಿಗೆ ತಲುಪಿದ್ದವು. ಎರಡು ಪಕ್ಷಗಳ ಎದುರು ಕಿಂಗ್ ಮೇಕರ್ ಆಗಿ ಗುರುತಿಸಿಕೊಂಡಿದ್ದ ಜೆಡಿಎಸ್ ಹಾಗೂ ಇಬ್ಬರು ಪಕ್ಷೇತರರು ಇದೀಗ ಯಾವುದೇ ಅಧಿಕಾರದ ಬೇಡಿಕೆ ಇಡದೇ ಬಿಜೆಪಿಗೆ ಬೆಂಬಲ ನೀಡಿದ್ದು, ಕಾಂಗ್ರೆಸ್​ಗೆ ಬಿಗ್ ಶಾಕ್ ನೀಡಿವೆ.

31 ಸದಸ್ಯ ಬಲದ ಕಾರವಾರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನ ಪಡೆದಿದ್ದರೆ, ಬಿಜೆಪಿಯೂ ಸಹ 11 ಸ್ಥಾನವನ್ನು ಪಡೆದಿತ್ತು. ಇನ್ನು ಜೆಡಿಎಸ್ 4 ಸ್ಥಾನದಲ್ಲಿ ಗೆದ್ದಿದ್ದರೆ, ಪಕ್ಷೇತರರು 5 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಥವಾ ಬಿಜೆಪಿ ಆಡಳಿತಕ್ಕೆ ಏರಲು ಜೆಡಿಎಸ್ ಅಥವಾ ಪಕ್ಷೇತರ ಸದಸ್ಯರ ಬೆಂಬಲ ಅಗತ್ಯವಾಗಿತ್ತು.

ಬಿಜೆಪಿಯೊಂದಿಗೆ ಕೈಜೋಡಿಸಿದ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು

ಇನ್ನು ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಕೆಲ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆರಲು ಭಾರಿ ಪೈಪೋಟಿ ನಡೆಸಿದ್ದರು. ಈ ನಡುವೆ ಇಬ್ಬರು ಪಕ್ಷೇತರರನ್ನು ಸೆಳೆದ ಬಿಜೆಪಿ 13 ಸ್ಥಾನಕ್ಕೇರಿತು. ಶಾಸಕ, ಸಂಸದರ ಮತ ಸೇರಿ ಒಟ್ಟು 15 ಮತಗಳಾಗಿದ್ದವು. ಅಧಿಕ್ಕಾರಕ್ಕೇರಲು 16 ಸ್ಥಾನಗಳ ಅಗತ್ಯವಿರುವ ಬೆನ್ನಲ್ಲೆ ಜೆಡಿಎಸ್​ನ 4 ಹಾಗೂ ಪಕ್ಷೇತರ ಇಬ್ಬರು ಬಿಜೆಪಿಗೆ ಬೆಂಬಲಿಸಿರುವುದಾಗಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಇನ್ನು ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದೇ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಸ್ಥಳೀಯವಾಗಿಯೂ ಬಿಜೆಪಿ ಶಾಸಕರಿರುವ ಕಾರಣ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಬೆಂಬಲಿಸಲಾಗುತ್ತಿದೆ. ಆದರೆ, ಸದಸ್ಯರು ನಗರದ ಮಾಲಾದೇವಿ ಮೈದಾನದ ಅಭಿವೃದ್ಧಿ, ಕೋಣೆನಾಲ ಸ್ವಚ್ಚತೆ, ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಬೇಡಿಕೆ ಇಟ್ಟಿದ್ದು, ಸಕಾರಾತ್ಮಕ ಬೆಂಬಲ ಸಿಕ್ಕಿದ್ದರಿಂದ ಬಿಜೆಪಿಗೆ ಬೇಷರತ್ ಬೆಂಬಲ ನೀಡುತ್ತಿರುವುದಾಗಿ ಆನಂದ್ ಅಸ್ನೋಟಿಕರ್ ತಿಳಿಸಿದ್ದಾರೆ.

ಇನ್ನು ಈಗಾಗಲೇ ಜೆಡಿಎಸ್‌ಗೆ ಇಬ್ಬರು ಪಕ್ಷೇತರರ ಸೇರ್ಪಡೆಯೊಂದಿಗೆ 6 ಸದಸ್ಯ ಬಲವನ್ನು ಹೊಂದಿದ್ದು ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ ಅಧಿಕಾರ ಹಿಡಿಯಲು ಪೂರ್ಣ ಬಹುಮತ ಲಭಿಸಲಿದೆ. ಅಲ್ಲದೇ ಅಧಿಕಾರಕ್ಕೆ ಬೇಡಿಕೆ ಇಡದೇ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ ಬಿಜೆಪಿಗೆ ಉಳಿಯಲಿದೆ. ಇನ್ನು ಬಿಜೆಪಿಯನ್ನು ಬೆಂಬಲಿಸಲು ಕಾರವಾರ ಅಭಿವೃದ್ಧಿ ವಿಚಾರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕೋಣೆನಾಲಾ ರಾಜಕಾಲುವೆ ಸ್ವಚ್ಛತೆ ಸೇರಿ ನಾಲ್ಕು ಬೇಡಿಕೆಗಳನ್ನು ಜೆಡಿಎಸ್ ಇರಿಸಿದ್ದು, ಒಂದು ವರ್ಷದ ಅವಧಿಯಲ್ಲಿ ಯಾವುದಾದರೂ ಎರಡು ಕೆಲಸಗಳನ್ನು ಮಾಡಿ ತೋರಿಸುವಂತೆ ಅಭಿವೃದ್ಧಿಯ ಷರತ್ತುಗಳನ್ನ ವಿಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.