ಶಿರಸಿ: ಅತಿ ವೇಗದಿಂದ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬ ಕಾಡು ಪ್ರಾಣಿಯಿಂದ ಪಾರಾಗಲು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ, ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ.
ಸಿದ್ದಾಪುರ ತಾಲೂಕಿನ ಬಾಳೆಕೊಪ್ಪದ ವಿನಾಯಕ ಹೆಗಡೆ (35) ಮೃತಪಟ್ಟ ವ್ಯಕ್ತಿ. ಈತ ತನ್ನ ದ್ವಿಚಕ್ರ ವಾಹನದಲ್ಲಿ ಸಿದ್ದಾಪುರದ ಹೇರೂರು ಕಡೆಯಿಂದ ತನ್ನ ಊರಿಗೆ ಬರುತ್ತಿರುವಾಗ ಹೊಳಬೇರಿ ಹತ್ತಿರ ಆಕಸ್ಮಿಕವಾಗಿ ರಸ್ತೆ ಬದಿಗೆ ಯಾವುದೋ ಕಾಡು ಪ್ರಾಣಿ ಬಂದಿದ್ದನ್ನು ನೋಡಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.