ಭಟ್ಕಳ: ಕಳೆದ 24 ವರ್ಷಗಳಿಂದಲೂ ನಿರಂತರವಾಗಿ ಶಬರಿಮಲೆಗೆ ಯಾತ್ರೆ ಕೈಗೊಳ್ಳುತ್ತಾ ಬಂದಿರುವ ವ್ಯಕ್ತಿಯೋರ್ವರು ಈ ಬಾರಿ ಸತತ ಒಂದು ವರ್ಷದ ಕಾಲ ವ್ರತವನ್ನು ಆಚರಿಸಿ ಮಂಗಳವಾರ ರಾತ್ರಿ ಶಬರಿಮಲೆ ದರ್ಶನಕ್ಕೆ ತೆರಳಿದರು.
ಭಟ್ಕಳ ತಾಲೂಕಿನ ಮುಂಡಳ್ಳಿಯ ಸೀತಾರಾಮ ಸ್ವಾಮಿಯ ಎನ್ನುವರು ಅಯ್ಯಪ್ಪ ಸ್ವಾಮಿ ವ್ರತಧಾರಿ ಸತತ ಏಳು ವರ್ಷಗಳಿಂದಲೂ ಪಾದಯಾತ್ರೆ ಮೂಲಕ ಅಯ್ಯಪ್ಪನ ದರ್ಶನ ಪಡೆಯುತ್ತ ಬಂದಿದ್ದಾರೆ.
2019 ನವಂಬರ್ನಲ್ಲಿ ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಟಪ ಮುಗಳಿಕೋಣೆಯಲ್ಲಿ ಅಯ್ಯಪ್ಪ ಮಾಲಾಧಾರಣೆ ಧರಿಸಿ 1 ವರ್ಷ ಅವಧಿಯ ವ್ರತ ಮುಗಿಸಿ ಮಂಗಳವಾರ ಶಬರಿಮಲೆ ಯಾತ್ರೆಗೆ ಪ್ರಯಾಣ ಬೆಳೆಸಿದರು.
ಪೂಜೆಯ ನೇತೃತ್ವವಹಿಸಿದ್ದ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾದ ಮಾರುತಿ ಗುರುಸ್ವಾಮಿ ಅವರು, ಮನದ ಅಭೀಷ್ಟಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು. ಈ ವೇಳೆ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಹಾಗೂ ಅಯ್ಯಪ್ಪ ಮಾಲಾಧಾರಿಗಳು, ಕುಟುಂಬದವರು, ದುರ್ಗಾ ಗೆಳೆಯರ ಬಳಗ ಸೇರಿದಂತೆ ಅನೇಕರು ಸೀತರಾಮ ಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಿದರು.