ಭಟ್ಕಳ: ಸ್ಥಳೀಯ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಲ್ವರು ವಿಕಲಚೇತನರಿಗೆ ಶಾಸಕ ಸುನೀಲ ನಾಯ್ಕ ತ್ರಿಚಕ್ರ ವಾಹನಗಳನ್ನು ವಿತರಿಸಿದರು.
2019-20ನೇ ಸಾಲಿನ ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶೇ 5ರ ಯೋಜನೆಯಡಿ ಪುರಸಭೆ ವ್ಯಾಪ್ತಿಯ ಇಬ್ಬರು ಹಾಗೂ ಜಾಲಿ ಪಪಂ ವ್ಯಾಪ್ತಿಯ ಇಬ್ಬರು ವಿಕಲಚೇತರನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಾಸಕ ಸುನೀಲ ನಾಯ್ಕ ನಾಲ್ಕು ತ್ರಿಚಕ್ರ ವಾಹನಗಳನ್ನು ವಿತರಿಸಿದರು.
ಸಹಾಯಕ ಆಯುಕ್ತ ಭರತ್ ಎಸ್., ತಹಶೀಲ್ದಾರ್ ಎಸ್. ರವಿಚಂದ್ರ, ಪುರಸಭೆ ಮುಖ್ಯಾಧಿಕಾರಿ ದೇವರಾಜು, ಜಾಲಿ ಪ.ಪಂ. ಪ್ರಭಾರ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ, ಜಾಲಿ ಪಪಂ ಸದಸ್ಯರು ಇದ್ದರು.