ETV Bharat / state

ಸಂಬಂಧಿಕರಿಂದಲೇ ಅಪಹರಣಕ್ಕೊಳಗಾದ ಭಟ್ಕಳದ ಬಾಲಕನ ರಕ್ಷಣೆ, ಇಬ್ಬರ ಬಂಧನ

author img

By

Published : Aug 22, 2022, 10:30 AM IST

ಅಪಹರಣಕ್ಕೊಳಗಾದ ಬಾಲಕನನ್ನು 24 ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Kidnapped boy found in Calangute beach Goa
ಅಪಹರಣಕ್ಕೊಳಗಾದ ಭಟ್ಕಳದ ಬಾಲಕ ಗೋವಾ ಕ್ಯಾಲಂಗುಟ್ ಬೀಚ್​​ನಲ್ಲಿ ಪತ್ತೆ

ಭಟ್ಕಳ: ಶನಿವಾರ ರಾತ್ರಿ ತಾಲೂಕಿನ ಆಜಾದ್ ನಗರದಲ್ಲಿ ಅಪಹರಣಕ್ಕೊಳಗಾದ 8 ವರ್ಷದ ಬಾಲಕ ಗೋವಾ ಕ್ಯಾಲಂಗುಟ್ ಬೀಚ್​​ನಲ್ಲಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿ ಸಿಪಿಐ ದಿವಾಕರ ನೇತೃತ್ವದಲ್ಲಿ ಬಾಲಕನನ್ನು ಅಪಹರಣಕಾರರಿಂದ ರಕ್ಷಿಸಿ ಭಟ್ಕಳಕ್ಕೆ ಕರೆ ತರಲಾಗಿದೆ. ಇಬ್ಬರು ಸಂಬಂಧಿಕರೇ ಕೃತ್ಯ ಎಸಗಿದ್ದು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಭಟ್ಕಳ ತಾಲೂಕಿನ ಆಜಾದ್ ನಗರದಲ್ಲಿ ಶನಿವಾರ ರಾತ್ರಿ ಅಲಿ ಸಾದಾ ಎಂಬ 8 ವರ್ಷದ ಬಾಲಕನನ್ನು ಅಪಹರಿಸಲಾಗಿತ್ತು. ಅಕ್ಕಪಕ್ಕದ ಮನೆಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಮಾರುತಿ ಇಕೋ ವ್ಯಾನ್​​ನಲ್ಲಿದ್ದ ವ್ಯಕ್ತಿಯೋರ್ವ ಇಳಿದು ಬಾಲಕನನ್ನು ಎತ್ತಿಕೊಂಡು ಪರಾರಿಯಾಗಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಶೋಧ ಕಾರ್ಯಾರಂಭಿಸಿದ್ದರು.

ಇದನ್ನೂ ಓದಿ: ಭಟ್ಕಳದಲ್ಲಿ ಬಾಲಕನ ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.