ETV Bharat / state

6 ದಿನ ಅವಕಾಶ ನೀಡಿದ್ರೇ ನಾನು ಇಡೀ ಶಿಕ್ಷಣ ವ್ಯವಸ್ಥೆ ಬದಲಿಸಿ ತೋರಿಸುವೆ : ಸರ್ಕಾರಕ್ಕೆ ಹೊರಟ್ಟಿ ಸವಾಲು

ಅದೆಷ್ಟೋ ಖಾಸಗಿ ಶಾಲೆ ಶಿಕ್ಷಕರಿಗೆ ಇಂದು ಔಷಧಿ ಪಡೆಯಲು ಹಣ ಇಲ್ಲದ ಸ್ಥಿತಿಗೆ ತಲುಪಿದ್ದಾರೆ. ಈ ಕಾರಣದಿಂದ ಪ್ರತಿಭಟನೆಗೆ ಮುಂದಾಗಿರುವ ಖಾಸಗಿ ಶಾಲೆ ಶಿಕ್ಷಕರ ನಡೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಸರ್ಕಾರ ವಿದ್ಯಾಗಮ ಮಾಡಿದೆ. ಆದರೆ, ಅದು ಯಾರಿಗೂ ಪ್ರಯೋಜನವಾಗಿಲ್ಲ..

Basavaraj Horatti
ಬಸವರಾಜ್ ಹೊರಟ್ಟಿ
author img

By

Published : Nov 30, 2020, 1:31 PM IST

ಕಾರವಾರ: ಕೋವಿಡ್‌ನಿಂದ ಹದಗೆಟ್ಟ ಶಿಕ್ಷಣ ವ್ಯವಸ್ಥೆ ಸರಿಪಡಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ನನಗೆ ಕೇವಲ ಆರು ದಿನ ಸಮಯವಕಾಶ ನೀಡಿದ್ರೆ ಶಿಕ್ಷಣ ವ್ಯವಸ್ಥೆ ಸರಿಪಡಿಸಿ ತೋರಿಸುತ್ತೇನೆ. ಸರಿಪಡಿಸದಿದ್ರೆ ನನ್ನ ಹೆಸರನ್ನು ಹೇಳಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸವಾಲು ಹಾಕಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದರಿಂದ ಎಂಟರವರೆಗಿನ ಮಕ್ಕಳಿಗೆ ಮೊದಲಿನಿಂದಲು ಕ್ಲಾಸ್ ಬೇಡ ಎಂದು ಹೇಳುತ್ತಿದ್ದೆ. ಉಳಿದಂತೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 10 ಮಕ್ಕಳಂತೆ ವಿಂಗಡಿಸಿ ಪ್ರತ್ಯೇಕವಾಗಿ ತರಗತಿ ತೆಗೆದುಕೊಳ್ಳುವಂತೆ ಪತ್ರ ಬರೆದು ಸರ್ಕಾರಕ್ಕೆ ಸಲಹೆ ನೀಡಿದ್ದೆ.

ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ

ಅಲ್ಲದೆ ಕೋವಿಡ್​ ವೇಳೆ ರಿಕ್ಷಾ ಚಾಲಕರು, ಕಾರ್ಮಿಕರಿಗೆ ಪ್ಯಾಕೇಜ್ ನೀಡಿದಂತೆ ಶಿಕ್ಷಕರಿಗೂ ನೀಡುವಂತೆ ತಿಳಿಸಿದ್ದೆ. ಆದರೆ, ಸರ್ಕಾರ ನಮ್ಮಂತ ಅನುಭವಸ್ಥರು ನೀಡುವ ಸಲಹೆಯನ್ನು ಕಿವಿಗೂ ಹಾಕಿಕೊಳ್ಳುತ್ತಿಲ್ಲ ಎಂದು ದೂರಿದರು.

ಸರ್ಕಾರ ಪ್ರಚಾರಕ್ಕಾಗಿ ಖಾಸಗಿ ಶಾಲೆಗಳಿಗೆ ಯಾರು ಶುಲ್ಕ ನೀಡಬೇಡಿ ಎಂದು ಹೇಳುತ್ತಿದೆ. ತಂದೆ-ತಾಯಿ ಇಬ್ಬರು ಸರ್ಕಾರಿ ವ್ಯವಸ್ಥೆಯಲ್ಲಿರುವವರು ಪೀಸ್ ಬೇಡ ಅಂದರೆ ಅದೇ ಪೀಸ್ ಹಣ ಪಡೆದು ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರು ಏನು ಮಾಡಬೇಕು.

ಅದೆಷ್ಟೋ ಖಾಸಗಿ ಶಾಲೆ ಶಿಕ್ಷಕರಿಗೆ ಇಂದು ಔಷಧಿ ಪಡೆಯಲು ಹಣ ಇಲ್ಲದ ಸ್ಥಿತಿಗೆ ತಲುಪಿದ್ದಾರೆ. ಈ ಕಾರಣದಿಂದ ಪ್ರತಿಭಟನೆಗೆ ಮುಂದಾಗಿರುವ ಖಾಸಗಿ ಶಾಲೆ ಶಿಕ್ಷಕರ ನಡೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಸರ್ಕಾರ ವಿದ್ಯಾಗಮ ಮಾಡಿದೆ. ಆದರೆ, ಅದು ಯಾರಿಗೂ ಪ್ರಯೋಜನವಾಗಿಲ್ಲ.

ಸರ್ಕಾರಕ್ಕೆ ಸಲಹೆ ಕೊಟ್ಟಲ್ಲಿ ತೆಗೆದುಕೊಳ್ಳುತ್ತಿಲ್ಲ. ನನಗೆ ಆರು ದಿನ ಅವಕಾಶ ನೀಡಿದ್ರೇ ನಾನು ಇಡೀ ಶಿಕ್ಷಣ ವ್ಯವಸ್ಥೆ ಬದಲಿಸಿ ತೋರಿಸುತ್ತೇನೆ. ಮಾಡದೇ ಇದ್ದರೆ ನನ್ನ ಹೆಸರನ್ನು ಹೇಳಬೇಡಿ ಎಂದು ಸವಾಲು ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.