ಕಾರವಾರ: ಖುಷಿ ಖುಷಿಯಾಗಿ ಅಪ್ಪನ ಹೊಸ ಆಟೋದಲ್ಲಿ ತೆರಳುತ್ತಿದ್ದ ಆರು ವರ್ಷದ ಬಾಲಕ ಅಪಘಾತದಿಂದಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕುಮಟಾ ತಾಲೂಕಿನ ಮಿರ್ಜಾನಿನ ನಾಗೂರು ಸಂತೆಗದ್ದೆ ಬಳಿ ನಡೆದಿದೆ.
ಕುಮಟಾ ತಾಲೂಕಿನ ಸಂತೆಗದ್ದೆ ನಿವಾಸಿ ತನ್ಮಯ್ ಸದಾನಂದ ಮಡಿವಾಳ ಮೃತಪಟ್ಟ ಬಾಲಕ. ಈತನು ತನ್ನ ತಂದೆ ಸದಾನಂದ ಶಂಕರ ಮಡಿವಾಳ ಜೊತೆ ಹೊಸ ಆಟೋರಿಕ್ಷಾದಲ್ಲಿ ಮಿರ್ಜಾನ ಕಡೆಯಿಂದ ಸಂತೆಗದ್ದೆಗೆ ತೆರಳುತ್ತಿರುವಾಗ ಎದುರಿನಿಂದ ಅತಿ ವೇಗವಾಗಿ ಬಂದ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಆಟೋರಿಕ್ಷಾದ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಪುಟ್ಟ ಬಾಲಕ ತನ್ಮಯ್ನ ಮುಖ ಹಾಗೂ ತಲೆಗೆ ಗಂಭೀರ ಗಾಯವಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಓದಿ...ನಾಮಪತ್ರ ಹಿಂಪಡೆಯಲು ಬಂದಾಗ ಪೊಲೀಸರೆದುರೇ ಮಹಿಳೆಯ ಅಪಹರಣ!!
ಅಲ್ಲದೇ ಅಪಘಾತದಲ್ಲಿ ಬೈಕ್ ಸವಾರ ಕೃಷ್ಣ ಮಡಿವಾಳ ಹಾಗೂ ಆಟೋರಿಕ್ಷಾ ಚಾಲಕ ಸದಾನಂದ ಮಡಿವಾಳ ಇವರಿಬ್ಬರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.