ETV Bharat / state

ಹಿಂದುಳಿದ ಯುವಕರನ್ನ ಬಳಸಿಕೊಂಡ ಹೆಗಡೆ ನಂತರ ಕೈ ಬಿಟ್ಟರು: ಸಿಎಂ ಆರೋಪ

ಅನಂತಕುಮಾರ ಹೆಗಡೆ ಹಿಂದುಳಿದ ಸಮುದಾಯದ ಯುವಕರನ್ನ ಬಳಸಿಕೊಂಡು ನಂತರ ಕೈ ಬಿಟ್ಟರು. ಸಚಿವರಾದ ನಂತರ ಲೂಟಿ ಮಾಡಿದ ಹಣವನ್ನು ಚುನಾವಣೆಗೆ ಬಳಸಲು ಮುಂದಾಗಿದ್ದಾರೆ. ಈ ಬಾರಿ ಅವರಿಗೆ ದುಡಿಯಲು ಕಾರ್ಯಕರ್ತರಿಲ್ಲ, ಅದಕ್ಕಾಗಿ ಮತದಾರರಿಗೆ ಹಣ ಹಂಚಿ ಎಲೆಕ್ಷನ್‌ ಎದುರಿಸುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು.

author img

By

Published : Apr 18, 2019, 10:05 PM IST

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ

ಕಾರವಾರ: ಈ ಬಾರಿಯ ಚುನಾವಣೆಯಲ್ಲಿ ಮತಗಳಿಕೆ ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವರಾಗಿ ಲೂಟಿ ಮಾಡಿದ ಹಣದ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಕುಮಾರಸ್ವಾಮಿ ಪಟ್ಟಣದ ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದರು.

ಈ ವೇಳೆ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ​ ಹೆಗಡೆ ವಿರುದ್ಧ ಕಿಡಿಕಾರಿದ ಅವರು, ಹೆಗಡೆ ಹಿಂದುಳಿದ ಯುವಕರನ್ನ ಬಳಸಿಕೊಂಡು ನಂತರ ಕೈ ಬಿಟ್ಟಿದ್ದಾರೆ. ಸಚಿವರಾದ ನಂತರ ಲೂಟಿ ಮಾಡಿದ ಹಣವನ್ನ ಬಳಸಿ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಅವರ ಬೆಂಬಲಿಗರು ಹಣದ ಸಮೇತ ಚುನಾವಣಾ ಆಯೋಗದ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಬಾರಿ ಅವರಿಗೆ ದುಡಿಯಲು ಕಾರ್ಯಕರ್ತರಿಲ್ಲ, ಅದಕ್ಕಾಗಿ ಹಣ ಹಂಚಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಆನಂದ್‌ ಅಸ್ನೇಟಿಕರ್‌ ಪರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ

ಕಳೆದ ಚುನಾವಣೆಯಲ್ಲಿ ಅತಿಕ್ರಮಣ ಸಮಸ್ಯೆ ಬಗೆಹರಿಸುವ ಬಗ್ಗೆ ಜಿಲ್ಲೆಯ ಜನರಿಗೆ ಮಾತು ಕೊಟ್ಟಿದ್ದೆ. ಆದರೆ ನಾವು ತೆಗೆದುಕೊಂಡ ತೀರ್ಮಾನಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದರಿಂದ ಹಿನ್ನೆಡೆಯಾಗಿದೆ. ಇದಕ್ಕೆ ಅರಣ್ಯ ಕಾಯಿದೆಯಲ್ಲಿ ಕೇಂದ್ರ ಸರ್ಕಾರ ಕೆಲ ತಿದ್ದುಪಡಿ ಮಾಡಬೇಕಿದೆ. ಹಾಗಾಗಿ, ಆದರೆ ಇಷ್ಟು ವರ್ಷ ಸಂಸದರಾಗಿದ್ದ ಅನಂತಕುಮಾರ್ ಏನು ಮಾಡಿದ್ದೀಯಾ? ಎಂದು ನೀವು ಅವರನ್ನು ಪ್ರಶ್ನಿಸಬೇಕು ಎಂದು ಹೇಳಿದರು.

ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಮಾತನಾಡಿದ ಸಿಎಂ, ಧರ್ಮ ರಕ್ಷಣೆ ಮಾಡುತ್ತೇನೆ ಎನ್ನುವ ಅನಂತಕುಮಾರ್ ಯುವಕರಿಗೆ ಉದ್ಯೋಗ ಕೊಡುವುದನ್ನು ಬಿಟ್ಟು ಕೈ ಕತ್ತಿ ಕೊಡುತ್ತಿದ್ದಾರೆ. ಆದ್ದರಿಂದ ಯುವಕರು ಎಚ್ಚೆತ್ತುಕೊಂಡು ಇಂತಹ ಪ್ರಚೋದನೆ ನೀಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಈ ಬಾರಿಯಾದರೂ ಸಂಸದರನ್ನು ಬದಲಾವಣೆ ಮಾಡಿ, ಒಂದು ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

Intro:ಕಾರವಾರ: ಮತಗಗಳಿಕೆ ಸಾಧ್ಯವಿಲ್ಲ ಎಂದು ಅರಿತ ಅನಂತಕುಮಾರ್ ಹೆಗಡೆ ಕೇಂದ್ರದ ಮಂತ್ರಿಯಾಗಿ ಲೂಟಿ ಮಾಡಿದ ಹಣದ ಮೂಲಕ ಜನರನ್ನು ಕೊಂಡುಕೊಳ್ಳಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದರು.
ರಾಮನಗರದಲ್ಲಿ ಮತದಾನ ಮಾಡಿ ನಂತರ ಅಲ್ಲಿಂದ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಕುಮಾರಸ್ವಾಮಿ ಪಟ್ಟಣದ ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಭಾಷಣ ನಡೆಸಿದರು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ​ ಹೆಗಡೆ ವಿರುದ್ದ ಕಿಡಿಕಾರಿದ ಅವರು, ಅನಂತಕುಮಾರ ಹೆಗಡೆ ಹಿಂದುಳಿದ ಯುವಕರನ್ನ ಬಳಸಿಕೊಂಡು ನಂತರ ಕೈ ಬಿಟ್ಟಿದ್ದಾರೆ. ಸಚಿವರಾದ ನಂತರ ಲೂಟಿ ಮಾಡಿದ ಹಣವನ್ನ ಬಳಸಿ ಚುನಾವಣೆ ನಡೆಸಲು ಮುಂದಾಗಿದ್ದು, ಅವರ ಬೆಂಬಲಿಗರು ಹಣದ ಸಮೇತ ಚುನಾವಣಾ ಆಯೋಗದ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಬಾರಿ ಅವರಿಗೆ ದುಡಿಯಲು ಕಾರ್ಯಕರ್ತರಿಲ್ಲ, ಅದಕ್ಕಾಗಿ ಹಣ ಹಂಚಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕಳೆದ ಚುನಾವಣೆಯಲ್ಲಿ ಅತಿಕ್ರಮಣ ಸಮಸ್ಯೆ ಬಗೆಹರಿಸುವ ಬಗ್ಗೆ ಜಿಲ್ಲೆಯ ಜನರಿಗೆ ಮಾತು ಕೊಟ್ಟಿದ್ದೆ. ಆದರೆ ನಾವು ಏನೇ ತಿರ್ಮಾನ ತೆಗೆದುಕೊಂಡರು ಸುಪ್ರೀಂ ಕೋರ್ಟ್ ಮಧ್ಯದಲ್ಲಿ ತಡೆ ನೀಡಿದ್ದರಿಂದ ಹಿನ್ನಡೆಯಾಗಿದೆ. ಇದಕ್ಕೆ ಅರಣ್ಯ ಕಾಯಿದೆಯಲ್ಲಿ ಕೆಲ ತಿದ್ದುಪಡಿ ಲೋಕಸಭೆಯಲ್ಲಿ ಮಾಡಬೇಕಿದೆ. ಆದರೆ ಇಷ್ಟು ವರ್ಷ ಲೋಕಸಭೆಯಲ್ಲಿದ್ದ ಅನಂತಕುಮಾರ್ ಏನು ಮಾಡಿದ್ದೀಯಾ ಎಂದು ನೀವು ಅವರನ್ನು ಪ್ರಶ್ನಿಸಬೇಕಿದೆ ಎಂದು ಹೇಳಿದರು.
ಅನಂತಕುಮಾರ್ ಹೆಗಡೆ ದೇಶಾಭಿಮಾನ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿಯವರು ಕಳೆದ ಬಾರಿ ಚಾಯವಾಲ ಕಥೆ ಹೇಳಿದ್ದರು. ಈ ಬಾರಿ ಚೌಕಿದಾರ್ ಕಥೆ ಹೆಣೆಯುತ್ತಿದ್ದಾರೆ. ಇಂತವರ ಬಗ್ಗೆ ತಿಳಿದು ಮತಹಾಕಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಸಿಎಂ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ, ಕಾಂಗ್ರೆಸ್ ಮುಖಂಡರಾದ ಶಾರದಾ ಶೆಟ್ಟಿ ಸೇರಿದಂತೆ ಹಲವು ಮುಖಂಡರುಗಳು ಪಾಲ್ಗೊಂಡು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸುವುದಾಗಿ ಹೇಳಿದರು.
ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಮಾತನಾಡಿ, ಅನಂತಕುಮಾರ ಹೆಗಡೆ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಪರೇಶ ಮೇಸ್ತಾ ಹೆಣದ ಮೇಲೆ ರಾಜಕೀಯ ಮಾಡಿದ ಅವರು ಹಿಂದು ಯುವಕರನ್ನು ಕೋರ್ಟು ಕಚೇರಿ ಅಲೆಯುವಂತೆ ಮಾಡಿದ್ದಾರೆ. ಧರ್ಮ ರಕ್ಷಣೆ ಮಾಡುತ್ತೇನೆ ಎನ್ನುವ ಅನಂತಕುಮಾರ್ ಯುವಕರಿಗೆ ಉದ್ಯೋಗ ಕೊಡುವುದನ್ನು ಬಿಟ್ಟು ಕೈಯ್ಯಿಗೆ ಕತ್ತಿ ಕೊಡುತ್ತಿದ್ದಾರೆ. ಆದ್ದರಿಂದ ಯುವಕರು ಎಚ್ಚೆತ್ತುಕೊಂಡು ಇಂತಹ ಪ್ರಚೋದನೆ ನೀಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಅವಿವೇಕಿ ಸಂಸದನಿಂದ ಇಂದು ಧರ್ಮ ಒಡೆಯುವಂತಾಗಿದೆ. ಈ ಬಗ್ಗೆ ನಾವೆಲ್ಲರು ಒಂದಾಗಬೇಕು. ಈ ಬಾರಿಯಾದರು ಬದಲಾವಣೆ ಮಾಡಿ ಒಂದು ಬಾರಿ ಅವಕಾಶ ನೀಡುವಂತೆ ಮನವಿ ಮಾಡಿದರು.Body:ಕConclusion:ಕ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.