ETV Bharat / state

ಗೆಲ್ಲಿಸು ತಾಯೇ ಮಾರಿಕಾಂಬೆ.... ಮಧುಕೇಶ್ವರನಿಗೂ ಅಡ್ಡಬಿದ್ದ ಕೇಂದ್ರ ಸಚಿವ... - temples

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅನಂತ್ ಕುಮಾರ್ ಹೆಗಡೆ ಇಂದು ತಾಲೂಕಿನ‌ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಅನಂತ್​ಕುಮಾರ್ ಹೆಗಡೆ
author img

By

Published : Apr 1, 2019, 6:38 PM IST

ಶಿರಸಿ : ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಚುನಾವಣೆ ಇದೀಗ ರಂಗೇರಿದ್ದು ಬಿಜೆಪಿ ಅಭ್ಯರ್ಥಿ ಅನಂತ್​ಕುಮಾರ್ ಹೆಗಡೆ ಟೆಂಪಲ್​ ರನ್ ನಡೆಸಿದ್ದಾರೆ. ಏಪ್ರಿಲ್ 2 ರಂದು ನಾಮಪತ್ರ ಸಲ್ಲಿಸಲು ತಯಾರಿ ನಡೆಸಿರುವ ಹೆಗಡೆ, ಇಂದು ತಾಲೂಕಿನ‌ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಅನಂತ್​ಕುಮಾರ್ ಹೆಗಡೆ

ದೇವಸ್ಥಾನಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಚುನಾವಣೆಗೆ ಏ‌.2 ರಂದು ತಾವು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಈ ಚುನಾವಣೆ ಪ್ರಜಾತಂತ್ರದ ವಿಶಿಷ್ಠಪೂರ್ಣ ಚುನಾವಣೆಯಾಗಿದೆ. ದೇಶಕ್ಕೆ ಹೊಸ ದಿಕ್ಕು ಸಿಗಲಿದೆ. ರಾಷ್ಟ್ರೀಯತೆಯ ಆಧಾರದ ಮೇಲೆ ಹಾಗೂ ಭವ್ಯ ರಾಷ್ಟ್ರ ನಿರ್ಮಾಣ ಮಾಡುವ ಸಂಕಲ್ಪದ ಮೇಲೆ ನಾವು ಚುನಾವಣೆ ಎದುರಿಸುತ್ತಿದ್ಧೇವೆ. ಕ್ಷೇತ್ರದ ಜನರ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಬಹುಮತದೊಂದಿಗೆ ಬಿಜೆಪಿ ಆಯ್ಕೆಯಾಗಲಿದೆ. ಜೊತೆಗೆ 2ನೇ ಮೂರಷ್ಟು ಬಹುಮತ ಬಿಜೆಪಿಗೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಂತ್​ಕುಮಾರ್ ಹೆಗಡೆ ಶಿರಸಿ ಶ್ರೀ ಮಾರಿಕಾಂಬಾ ದೇವಾಸ್ಥಾನ, ಬನವಾಸಿಯ ಮಧುಕೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು

ಶಿರಸಿ : 
ಉತ್ತರ ಕನ್ನಡ ಜಿಲ್ಲೆ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆ ಟೆಂಪಲ್ ರನ್ ನಡೆಸಿದ್ದಾರೆ. ಏಪ್ರಿಲ್ ೨ ರಂದು ನಾಮ ಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಸೋಮವಾರ ಶಿರಸಿ ತಾಲೂಕಿನ‌ ವಿವಿಧ ದೇವಸ್ಥಾನ ಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. 

ಕಾರವಾರದಲ್ಲಿ‌  ಮಂಗಳವಾರ ನಾಮಪತ್ರ ಸಲ್ಲಿಸಲಿದ್ದು, ಸತತ ನಾಲ್ಕನೇ ಗೆಲುವಿಗೆ ದೇವರ ಮೊರೆ ಹೋಗಿದ್ದಾರೆ. 
 ಶಿರಸಿ ಶ್ರೀ ಮಾರಿಕಾಂಬೆ ದೇವಾಸ್ಥಾನ, ಬನವಾಸಿಯ ಮಧುಕೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ  ಹಾಲಿ ಸಂಸದ ಹೆಗಡೆ ಸಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಕುಮಾರ ಹೆಗಡೆ, ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಚುನಾವಣೆಗೆ ಏ‌.೨ ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ಚುನಾವಣೆ ಪ್ರಜಾತಂತ್ರದ ವಿಶಿಷ್ಠಪೂರ್ಣ ಚುನಾವಣೆ. ದೇಶಕ್ಕೆ ಹೊಸ ದಿಕ್ಕು ಸಿಗುತ್ತಿರುವ ಚುನಾವಣೆ. ಅಸ್ಮಿತಿಯತೇ ಆಧಾರದ ಮೇಲೆ, ರಾಷ್ಟ್ರೀಯತೆ ಆಧಾರದ ಮೇಲೆ ಭವ್ಯ ರಾಷ್ಟ್ರ ನಿರ್ಮಾಣ ಮಾಡುವ ಸಂಕಲ್ಪದ ಮೇಲೆ ನಾವು ನಡೆಯುತ್ತಿದ್ದೇವೆ. ದೇವರಲ್ಲಿ ಕ್ಷೇತ್ರದ ಜನರ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದೇನೆ. ಜೊತೆಯಲ್ಲಿ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಬಹುತದೊಂದಿಗೆ ಬಿಜೆಪಿ ಆಯ್ಕೆಯಾಗಲಿದೆ. ಜೊತೆಗೆ ೨/೩ ಬಹುಮತ ಬಿಜೆಪಿಗೆ ದೇಶದಲ್ಲಿ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
........
ಸಂದೇಶ ಭಟ್ ಶಿರಸಿ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.