ETV Bharat / state

ಅನಂತ್ ಕುಮಾರ್ ಹೆಗಡೆ ಓರ್ವ ಅವಿವೇಕಿ: ಸಿಎಂ ಟೀಕೆ

ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡುವ ಅನಂತಕುಮಾರ ಹೆಗಡೆ ಓರ್ವ ಅವಿವೇಕಿ- ಆ ವ್ಯಕ್ತಿ ಬಳಸುವ ಪದಗಳು ಅನಾಗರಿಕರಿಗಿಂತಲೂ ಕಡೆ- ಕೇಂದ್ರ ಸಚಿವನ ವಿರುದ್ಧ ಕಾರವಾರದಲ್ಲಿ ಸಿಎಂ ಕುಮಾರಸ್ವಾಮಿ ಟೀಕಾ ಪ್ರಹಾರ.

ಸಿಎಂ ಕುಮಾರಸ್ವಾಮಿ
author img

By

Published : Apr 4, 2019, 5:01 PM IST

ಕಾರವಾರ:ಬಿಜೆಪಿ ಅಭ್ಯರ್ಥಿಅನಂತಕುಮಾರ್ ಹೆಗಡೆ ಓರ್ವ ಅವಿವೇಕಿ ಲೋಕಸಭಾ ಸದಸ್ಯ. ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡುವ ಈ ವ್ಯಕ್ತಿ ಬಳಸುವ ಪದಗಳು ಅನಾಗರಿಕರಿಗಿಂತಲೂ ಕಡೆಯಾಗಿವೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದರು.

ಕಾರವಾರದಲ್ಲಿ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಐದು ಬಾರಿ ಕ್ಷೇತ್ರದಿಂದ ಆಯ್ಕೆಯಾದ ಅನಂತ್ ಕುಮಾರ್ ಹೆಗಡೆ ಕೊಟ್ಟಿರುವ ಕೊಡುಗೆ ಏನು ಎಂಬುದನ್ನು ಜಿಲ್ಲೆಯ ಜನರು ಹಾಗೂ ಯುವಕರು ಯೋಚನೆ ಮಾಡಬೇಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರೇಶ್ ಮೇಸ್ತಾ ಸಾವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಂಡರು. ಗಲಭೆಯಲ್ಲಿ ಅಮಾಯಕ ಜನರನ್ನು ಮುಂದೆ ಬಿಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು. ಇದೆಲ್ಲವನ್ನು ಜಿಲ್ಲೆಯ ಜನರು ಸೂಕ್ಷ್ಮವಾಗಿ ಅರಿತುಕೊಳ್ಳಬೇಕು ಎಂದರು.

ಪ್ರಧಾನಿ ಮೋದಿ ಅವರು ರೈತ ಕುಟುಂಬಗಳಿಗೆ ಪ್ರತಿ ವರ್ಷ ಆರು ಸಾವಿರ ನೀಡುವುದಾಗಿ ತಿಳಿಸಿದ್ದರು. ಆದರೆ ರಾಜ್ಯದಿಂದ ಸುಮಾರು ೧೧ ಲಕ್ಷ ರೈತರ ಸಂಪೂರ್ಣ ಮಾಹಿತಿ ಅಪಲೋಡ್​ ಮಾಡಲಾಗಿದೆ. ಆದರೆ ಇವರೆಗೂ ಆಯ್ಕೆ ಮಾಡಿರುವುದು ೧೭ ಜನರನ್ನು ಮಾತ್ರ. ಹಣ ಸಂದಾಯವಾಗಿರುವುದು ನಾಲ್ಕು ಜನರಿಗೆ ಮಾತ್ರ ಎಂದು ಆರೋಪಿಸಿದರು.

ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾರವಾರದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಟೀಕಾಪ್ರಹಾರ

ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿಯವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗಡೆ ಅರಣ್ಯ ಹಕ್ಕು ಸಮಸ್ಯೆ ಬಗೆಹರಿಸಿಲ್ಲ, ರೈತರ ಸಾಲ ಮನ್ನಾ ಮಾಡಿಲ್ಲವೆಂದು ಹೇಳಿ ನನಗೆ ಉತ್ತರಕನ್ನಡ ಜಿಲ್ಲೆಗೆ ಬರುವ ನೈತಿಕ ಹಕ್ಕಿಲ್ಲ ಎನ್ನುತ್ತಾರೆ. ಆದರೆ ರೈತರ ಸಾಲಮನ್ನಾದ ಮಾಹಿತಿ ಕೊರತೆ ಇದ್ದಲ್ಲಿ ಅವರಿಗೆ ಎಲ್ಲಿಗೆ ಕಳಸಿಕೊಡಬೇಕು ಅಲ್ಲಿಗೆ ಕಳುಹಿಸಿಸುತ್ತೇವೆ ಎಂದರು.

ಅರಣ್ಯ ಹಕ್ಕು ಸಮಸ್ಯೆ ಗಮನಕ್ಕಿದೆ. ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಕಾನೂನಿನಲ್ಲಿ ತಿದ್ದುಪಡಿ ತರಬೇಕಿದೆ. ಆದರೆ ಬಿಜೆಪಿಯವರು ಇದನ್ನು ಮಾಡುತ್ತಿಲ್ಲ. ಅನಂತಕುಮಾರ್ ಹೆಗಡೆ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು ಇಲ್ಲಿವರೆಗೆ ಎಷ್ಟು ಬಾರಿ ಸಂಸತ್​ನಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದಾರೆ ಎಂಬುದನ್ನು ಜನರು ತಿಳಿಯಬೇಕಿದೆ ಎಂದು ಹೇಳಿದರು.

ಮುಖ್ಯಮಂತ್ರಿಯಾದ ಬಳಿಕ ಉತ್ತರಕ್ನಡ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳಿಗೆ ಬರಲು ಸಾಧ್ಯವಾಗಿಲ್ಲ. ಅದಕ್ಕೆ ಜಿಲ್ಲೆಯ ಜನರಲ್ಲಿ ಕ್ಷಮೆ ಕೋರುತ್ತೇನೆ. ಆದರೆ ಉಪಯೋಗಕ್ಕೆ ಬಾರದ ಅನಂತಕುಮಾರ್ ಹೆಗಡೆಯನ್ನು ಇನ್ನಾದರು ಜನರು ತಿರಸ್ಕರಿಸಬೇಕು. ಮೋದಿ ಮೋದಿ ಎಂದು ಕೂಗುವ ಯುವಕರು ಮೋದಿ ಮಾಡಿದ ಕೆಲಸಗಳೇನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಿಎಂ ಸಲಹೆ ನೀಡಿದರು.

ಈ ವೇಳೆ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್, ಶಾಸಕರಾದ ಶಿವರಾಮ್ ಹೆಬ್ಬಾರ್, ಅಂಜಲಿ ಲಿಂಬಾಳ್ಕರ್​, ಮಾಜಿ ಶಾಸಕ ಮಂಕಾಳ ವೈದ್ಯ, ಶಾರದಾ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Intro:ಕಾರವಾರ: ಸ್ಕ್ರೀಪ್ಟ್ ಎಫ್ಟಿಪಿ ಮೂಲಕ ಕಳುಹಿಸಲಾಗಿದೆ ಸರ್

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.