ETV Bharat / state

ಉತ್ತರಕನ್ನಡದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ : ಅನಂತಕುಮಾರ್ ಹೆಗಡೆ ಭವಿಷ್ಯ

3- 4 ವರ್ಷಗಳಲ್ಲಿ ಕರಾವಳಿಯಲ್ಲಿ 4- 5 ಲಕ್ಷ ಫ್ಲೋಟಿಂಗ್ ಪಾಪ್ಯುಲೇಶನ್ ಹೆಚ್ಚಾಗುತ್ತದೆ. ನಮ್ಮವರು ಇದನ್ನು ಬಳಸಿಕೊಳ್ಳದಿದ್ದರೆ ಚುನಾವಣೆಯಲ್ಲಿ ಈ ಜಾತಿ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನು 50 ವರ್ಷ ಕಳೆದ್ರೆ ಹಿಂದೂಗಳು ಅಲ್ಪ ಸಂಖ್ಯಾತರಾಗುತ್ತಾರೆ ಎಂದು ಸಂಸದ ಅನಂತಕುಮಾರ್ ಹೆಗಡೆ ಭವಿಷ್ಯ ನುಡಿದಿದ್ದಾರೆ..

ಅನಂತಕುಮಾರ್ ಹೆಗ್ಡೆ
ಅನಂತಕುಮಾರ್ ಹೆಗ್ಡೆ
author img

By

Published : Jan 30, 2022, 12:16 PM IST

Updated : Jan 30, 2022, 1:12 PM IST

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನು 50 ವರ್ಷ ಕಳೆದ್ರೆ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ದೇಶದಲ್ಲಿ ಅಪಾಯದ ಪರಿಸ್ಥಿತಿ ಇದೆ.‌ ಸಂಸ್ಕೃತಿಯ ಮೂಲ ಕಳಚುತ್ತಿರುವಾಗ ನಮ್ಮ ಹೆಸರಿಟ್ಟುಕೊಂಡು ಹೋದ್ರೆ ಏನು ಪ್ರಯೋಜನ?. ಜಿಲ್ಲೆಯ ಅಭಿವೃದ್ಧಿ ನಮ್ಮವರಿಂದ ನಮ್ಮವರಿಗೆ ಆಗಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಹೊನ್ನಾವರದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, 3-4 ವರ್ಷಗಳಲ್ಲಿ ಕರಾವಳಿಯಲ್ಲಿ 4- 5 ಲಕ್ಷ ಫ್ಲೋಟಿಂಗ್ ಪಾಪ್ಯುಲೇಶನ್ ಹೆಚ್ಚಾಗುತ್ತದೆ. ನಮ್ಮವರು ಇದನ್ನು ಬಳಸಿಕೊಳ್ಳದಿದ್ದರೆ ಚುನಾವಣೆಯಲ್ಲಿ ಈ ಜಾತಿ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ.

ಬೇರೆ ರಾಜ್ಯಗಳಿಂದ ಬಂದವರು ಇಲ್ಲಿನ ಶಾಸಕರು, ಸಂಸದರಾಗುತ್ತಾರೆ. ಸೀಬರ್ಡ್​ಗೆ ಒಂದು ಮುಕ್ಕಾಲು ಲಕ್ಷ ಜನ ಹೊರಗಡೆಯಿಂದ ಬರುತ್ತಾರೆ. ಅವರು ನಾಳೆಗೆ ಮತ ಹಾಕಿದರೆ ನಮ್ಮಲ್ಲಿ ಇಬ್ಬರು ಶಾಸಕರು ಗೆಲ್ಲುತ್ತಾರೆ ಎಂದಿದ್ದಾರೆ.

ಹೊನ್ನಾವರದಲ್ಲಿ ಮಾತನಾಡಿದ ಅನಂತಕುಮಾರ್ ಹೆಗಡೆ

ಇಷ್ಟು ವರ್ಷ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರಲಿಲ್ಲ. ಚುನಾವಣೆ, ಪಾರ್ಟಿಗೆ ಡ್ಯಾಮೇಜ್ ಆದರೆ ಎಂದು ಸುಮ್ಮನಿರುತ್ತಿದ್ದೆವು. ಆದರೆ, ಈ ಬಾರಿ ಯಾರೇ ಏನೇ ಮಾಡಿದರೂ ಮಾಡೋ ಕೆಲಸ ಮಾಡಿಯೇ ಹೋಗುವುದು ಎಂದು ತೀರ್ಮಾನ ಮಾಡಿಯಾಗಿದೆ. ಇನ್ನುಮುಂದೆ ಚರ್ಚೆಗೆ ಅವಕಾಶವೇ ಇಲ್ಲ.

ಕೆಲವು ಮಂದಿ ಆಶಾಢಭೂತಿಗಳು ಭಾಷಣ ಮಾಡುತ್ತಿರುತ್ತಾರೆ. ಕೃಷಿ- ತೋಟಗಾರಿಕೆಯಾಧಾರಿತ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಎಂದು ಭಾಷಣ ಹೊಡೆಯುತ್ತಿರುತ್ತಾರೆ. ಆದರೆ, ಕೃಷಿಕನಾಗಿ ನನಗೆ ವಾಸ್ತವ ಗೊತ್ತು ಎಂದರು.

ಕೋರ್ಟ್​ಗೆ ಹೋಗುವುದೇ ಜಿಲ್ಲೆಯ ಕೆಲವರದ್ದು ಭಾರಿ ಶೂರತ್ವ. ಅಭಿವೃದ್ಧಿಗೆ ಅಡ್ಡಗಾಲು ಹಾಕುವುದೇ ಅವರ ಶೂರತನ. ನಿಜಕ್ಕೂ ನಾಚಿಕೆಯಾಗಬೇಕು ಅಂತವರಿಗೆ. ಈ ಎರಡು ವರ್ಷದಲ್ಲಿ ಉತ್ತರ ಕನ್ನಡಕ್ಕೆ ಏನೇನು ಅಭಿವೃದ್ಧಿಯಾಗಬೇಕೋ ಮಾಡಿಯೇ ಹೋಗುತ್ತೇವೆ. ನಮ್ಮ ಜೊತೆ ಬರುವುದಾದರೆ ಬನ್ನಿ, ಅದನ್ನು ಬಿಟ್ಟು ಅಡ್ಡವೇನಾದರೂ ಬಂದರೆ ಅವತ್ತು ನಮ್ಮ ಧ್ವನಿ ಬದಲಾಗುತ್ತದೆ ಎಂದು ಹೇಳಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 30, 2022, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.