ETV Bharat / state

ಮುರುಡೇಶ್ವರ ಶಿವನ ಮೂರ್ತಿ ವಿಕೃತಿ : ಭದ್ರತೆ ಪರಿಶೀಲಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ್

ಐಸಿಸ್ ಮ್ಯಾಗಜೀನ್​ನಲ್ಲಿ ಶಿವನಮೂರ್ತಿಯನ್ನು ವಿಕೃತಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಡೇಶ್ವರ ದೇವಸ್ಥಾನಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಇಂದು ದೇಗುಲಕ್ಕೆ ಕಾರವಾರ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಎಸ್. ಬದರಿನಾಥ ಅವರು ಭೇಟಿ ನೀಡಿ ಭದ್ರತೆಯ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಿಸಿಟಿವಿ ಹೆಚ್ಚಿಸುವಂತೆ ಹಾಗೂ ಕರಾವಳಿಯಲ್ಲಿ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು..

murudeshwar-temple
ಮುರುಡೇಶ್ವರ ದೇವಸ್ಥಾನ
author img

By

Published : Nov 26, 2021, 4:39 PM IST

ಭಟ್ಕಳ : ಐಸಿಸ್ ಮ್ಯಾಗಜೀನ್​ನಲ್ಲಿ ಮುರುಡೇಶ್ವರ ಶಿವನಮೂರ್ತಿಯನ್ನು ವಿಕೃತಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಡೇಶ್ವರ ದೇವಸ್ಥಾನಕ್ಕೆ ಭದ್ರತೆ ಒದಗಿಸಲಾಗಿದೆ.

ಈ‌ ಹಿನ್ನೆಲೆ ಇಂದು ದೇಗುಲಕ್ಕೆ ಕಾರವಾರ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಎಸ್. ಬದರಿನಾಥ ಅವರು ಭೇಟಿ ನೀಡಿ ಸಿಸಿಟಿವಿ ಅಳವಡಿಕೆ ಹೆಚ್ಚಿಸಿ ಪ್ರತಿ ನಿತ್ಯ ನಿಗಾ ಇಡುವಂತೆ ಸೂಚನೆ ನೀಡಿದರು.

ಮುರುಡೇಶ್ವರ ದೇವಸ್ಥಾನದ ಭದ್ರತೆ ಪರಿಶೀಲಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ್

High alert in Murudeshwar temple : ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ತದನಂತರ ಪ್ರಾಂಗಣದ ಸುತ್ತಲು ಓಡಾಡಿ ಪೊಲೀಸ್​ ಸಿಬ್ಬಂದಿ ಬಂದೋಬಸ್ತ್ ಪರಿಶೀಲಿಸಿದರು.

ಅಲ್ಲದೆ, ಹೆಚ್ಚಿನ ನಿಗಾವಹಿಸುವಂತೆ ಡಿವೈಎಸ್ಪಿ ಬೆಳ್ಳಿಯಪ್ಪ, ನಗರ ಠಾಣಾ ಸಿಪಿಐ ದಿವಾಕರ, ಗ್ರಾಮೀಣ ಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ ಅವರಿಗೆ ಸೂಚನೆ ನೀಡಿದರು.

ಇನ್ನು ಮುರುಡೇಶ್ವರದ ಮುಖ್ಯ ಸ್ಥಳದಲ್ಲಿ ಹೊಸದಾಗಿ ಸಿಸಿಟಿವಿ ಅಳವಡಿಕೆ ಹಾಗೂ ಈಗಾಗಲೇ ಅಳವಡಿಸಲಾದ ಸ್ಥಳದಲ್ಲಿ ಸಿಸಿಟಿವಿ ಕಾರ್ಯನಿರ್ವಹಣೆ ಸಮರ್ಪಕವಾಗಿ ಆಗುವಂತೆ ಗಮನ ಹರಿಸಿ ಎಂದು ಸೂಚಿಸಿದರು.

ದೇವಾಲಯದ ಆಡಳಿತ ಕಮಿಟಿ ಅವರಿಗೆ ದೇವಾಲಯದ ಆವರಣ, ಪ್ರಾಂಗಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ನಿರ್ವಹಣೆ ಪರಿಶೀಲಿಸಿ ದ್ರಶ್ಯಾವಳಿ ಸಂಗ್ರಹ ಮಾಡುವಂತೆ ತಿಳಿಸಿದರು.

ಅದೇ ರೀತಿ ನಿತ್ಯವೂ ಬಂದು ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಯಾರೇ ಅನುಮಾನಾಸ್ಪದ ರೀತಿ ಓಡಾಟ ಕಂಡು ಬಂದಲ್ಲಿ ಅವರ ತಪಾಸಣೆ, ಮಾಹಿತಿ ಸಂಗ್ರಹಣೆಗೆ ಖಡಕ್ ಸೂಚನೆ ನೀಡಿದರು.

ಇದೇ ವೇಳೆ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ, ಸಿಪಿಐ ಅವರೊಂದಿಗೆ ಶಿವನಮೂರ್ತಿಯ ಸುತ್ತಮುತ್ತಲು ಅದರಲ್ಲಿ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯಿಂದ ದಿನವೂ ಪೆಟ್ರೋಲಿಂಗ್ ಹೆಚ್ಚಿಸುವಂತೆ ಆದೇಶ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.