ಶಿರಸಿ: ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ ಸೇರಿದಂತೆ ಮೂರು ವಾಹನಗಳಿಗೆ ದುಷ್ಕರ್ಮಿಗಳು ಕಲ್ಲುತೂರಿ ಕಾರಿನ ಗಾಜುಗಳನ್ನು ಜಖಂಗೊಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ನಗರದಲ್ಲಿ ಇಂದು ನಡೆದಿದೆ.
ಯಲ್ಲಾಪುರ ತಾಲೂಕು ಆಸ್ಪತ್ರೆಯ ಎದುರು ವಾಹನದ ಪಾರ್ಕಿಂಗ್ ಸ್ಥಳದಲ್ಲಿ ನಿತ್ಯ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಕಿಡಿಗೇಡಿಗಳು ಬಿಯರ್ ಬಾಟಲ್ ಹಾಗೂ ಕಲ್ಲುಗಳಿಂದ ವಾಹನಗಳಿಗೆ ಬಿಸಾಡಿದ್ದು ಇದರಿಂದ ವಾಹನಗಳು ಜಖುಂ ಆಗಿವೆ. ಈ ಘಟನೆ ಸಂಬಂಧ ಯಲ್ಲಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.