ETV Bharat / state

ಕಾರವಾರದ ಸುದ್ದಿಗಳು: ಸಿಕ್ಕ ಚಿನ್ನ ಮರಳಿಸಿದ ಯುವಕ, ಮನೆಯಲ್ಲಿ ತಲ್ವಾರ್ ಇಟ್ಟ ಆರೋಪಿ ಅರೆಸ್ಟ್​

ರಸ್ತೆಯಲ್ಲಿ ಸಿಕ್ಕ 30 ಗ್ರಾಂ ಚಿನ್ನವನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಯುವಕನೊಬ್ಬ ಪ್ರಾಮಾಣಿಕತೆ ಮೆರೆದ ಘಟನೆ ಭಟ್ಕಳದ ಮುರ್ಡೇಶ್ವರ ನಾಡವರ ಕೇರಿಯಲ್ಲಿ ನಡೆದಿದೆ.

Karwar
ಸಿಕ್ಕ ಚಿನ್ನ ಮರಳಿಸಿದ ಯುವಕನಿಗೆ ಸನ್ಮಾನ
author img

By

Published : Apr 7, 2023, 9:56 AM IST

ಕಾರವಾರ: ಹಾಸಿಗೆ ಕೆಳಗೆ ಬಚ್ಚಿಟ್ಟ ತಲ್ವಾರ್ ಅನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಹೊನ್ನಾವರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಎಮ್ಮೆಪೈಲ್ ನಿವಾಸಿ ನಾಗರಾಜ ಎಂಬಾತನ ಮನೆಯಲ್ಲಿ ತಲ್ವಾರ್ ಪತ್ತೆಯಾಗಿದ್ದು, ಸಿಪಿಐ ಮಂಜುನಾಥ ಇ ಒ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿ ಸಮೇತ ಮಾರಕಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಸಮಯದಲ್ಲಿ ಯಾವುದೋ ರಾಜಕೀಯ ಪಕ್ಷಕ್ಕೆ ಬೆಂಬಲ ಸೂಚಿಸಿ ಹೀನಕೃತ್ಯ ಎಸಗುವ ಸಂಚನ್ನು ರೂಪಿಸಿದ್ದ ಎನ್ನುವ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಸರ್ಚ್​​ ವಾರಂಟ್ ಸಮೇತ ಆರೋಪಿ ಮನೆಗೆ ಎಂಟ್ರಿಕೊಟ್ಟ ಸಿಬ್ಬಂದಿ ಎರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರು. ಈ ವೇಳೆ, ಮಂಚದ ಮೇಲಿರುವ ಬೆಡ್‌ ಕೆಳಗೆ 2 ಅಡಿ 6 ಇಂಚು ಉದ್ದದ ಹರಿತವಾಗಿರುವ ಕಬ್ಬಿಣದ ಲಾಂಗ್‌ ಪತ್ತೆಯಾಗಿದೆ. ಮಾರಕಾಸ್ತ್ರದ ಬಗ್ಗೆ ನಾಗರಾಜ ನಾಯ್ಕ ವಿಚಾರಿಸಿದರೆ ಸಮರ್ಪಕವಾಗಿ ಉತ್ತರಿಸಿಲ್ಲ ಎನ್ನಲಾಗಿದೆ. ಈ ಕುರಿತು ಕಲಂ 25(1)(ಬಿ) (ಬಿ)ಭಾರತೀಯ ಆಯುಧ ಅಧಿನಿಯಮ 1959 ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಸಿಕ್ಕ ಚಿನ್ನ ಮರಳಿಸಿದ ಯುವಕ : ಭಟ್ಕಳದ ಮುರ್ಡೇಶ್ವರ ನಾಡವರ ಕೇರಿ ರಸ್ತೆಯಲ್ಲಿ ಸಿಕ್ಕ ಪರ್ಸ್‌ನಲ್ಲಿದ್ದ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನವನ್ನು ಪೊಲೀಸರ ಮುಖಾಂತರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಯುವಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ಗಣೇಶ ಈಶ್ವರ ನಾಯ್ಕ ಮುರ್ಡೇಶ್ವರದ ನಾಡವರ ಕೇರಿ ರಸ್ತೆಯಲ್ಲಿ ತೆರಳುವಾಗ 12 ಉಂಗುರ ಹಾಗೂ 2 ಜೊತೆ ಕಿವಿ ಓಲೆಗಳು ಇರುವ ಅಂದಾಜು 30 ಗ್ರಾಂ ತೂಕದ ಪರ್ಸ್ ಸಿಕ್ಕಿದೆ. ಈ ವೇಳೆ, ಆಸುಪಾಸಿನಲ್ಲಿ ಯಾರೂ ಕಾಣದಿದ್ದಾಗ ಅದನ್ನು ತೆಗೆದುಕೊಂಡ ಯುವಕ. ನೇರವಾಗಿ ಮುರ್ಡೇಶ್ವರ ಪೊಲೀಸ್​ ಠಾಣೆಗೆ ತೆರಳಿ ನೀಡಿದ್ದಾನೆ. ಬಳಿಕ ಪೊಲೀಸರು ಚಿನ್ನ ಕಳೆದುಕೊಂಡ ವಾರಸುದಾರ ಜೋಸೆಫ್ ಡಿಸೋಜಾ ಅವರನ್ನು ಪತ್ತೆ ಹಚ್ಚಿ, ಪೊಲೀಸ್ ಠಾಣೆಗೆ ಕರೆಸಿ ಯುವಕನ ಮೂಲಕ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿ ಬಂಗಾರ ಹಸ್ತಾಂತರಿಸಿದರು. ಈ ವೇಳೆ, ಗಣೇಶ ಈಶ್ವರ ನಾಯ್ಕ ಅವರ ಪ್ರಾಮಾಣಿಕತೆಗೆ ಮುರ್ಡೇಶ್ವರ ಪೊಲೀಸ್ ಠಾಣೆ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಇದನ್ನೂ ಓದಿ : ಆಮೆ ಸಂರಕ್ಷಣೆಗೆ ಸಂಕಲ್ಪ..ಕಾರವಾರದಲ್ಲಿ ಗಮನ ಸೆಳೆದ 'ಕಡಲಾಮೆ' ಉತ್ಸವ

ಮೀನು ವಾಹನದಲ್ಲಿ ಗೋ ಮಾಂಸ ಸಾಗಾಟ : ಅಪಘಾತಗೊಂಡ ಮೀನಿನ ಲಾರಿಯೊಂದರಲ್ಲಿ ಕ್ವಿಂಟಲ್​ಗಟ್ಟಲೇ ಗೋ ಮಾಂಸ ಪತ್ತೆಯಾದ ಘಟನೆ ಕುಮಟಾದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಚಾಲಕನ ನಿಯಂತ್ರ ತಪ್ಪಿ ಲಾರಿ ವಿದ್ಯುತ್ ಕಂಬಗಳಿಗೆ ಗುದ್ದಿದೆ. ಈ ವೇಳೆ ಸ್ಥಳೀಯರು ಲಾರಿ ಬಾಗಿಲು ತೆರೆದು ನೋಡಿದಾಗ ಮೀನಿನ ಬದಲು ಗೋಮಾಂಸ ಪತ್ತೆಯಾಗಿದೆ. ಐಸ್ ಹಾಕಿ ಶಿರಸಿ ಕಡೆಯಿಂದ ಭಟ್ಕಳಕ್ಕೆ ಸಾಗಿಸಲಾಗುತ್ತಿತ್ತು. ವಾಹನವು ಕುಮಟಾದ್ದು ಎಂದು ತಿಳಿದು ಬಂದಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕಾರವಾರ: ಬಿಜೆಪಿ ಸೇರಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ; ಪೊಲೀಸರಿಗೆ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.