ಶಿರಸಿ : ರೈತರೊಬ್ಬರಿಂದ ಮನೆ ಸಂಖ್ಯೆ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಜಾನ್ಮನೆ ಗ್ರಾಮ ಪಂಚಾಯಿತಿ ಪಿಡಿಒ ಕೃಷ್ಣಪ್ಪ ಯಲ್ವಗಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಕುಕ್ರಿ ಗ್ರಾಮದ ಸುಧೀಂದ್ರ ಹೆಗಡೆ ಎಂಬುವವರು 2014ರಲ್ಲಿ ಹೊಸ ಮನೆ ಕಟ್ಟಿಸಿದ್ದರು. ಅದಕ್ಕೆ ಸಂಖ್ಯೆ ನೀಡಲು ಪಿಡಿಒ 15 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದಾಗಿ ಸುಧೀಂದ್ರ ಎಸಿಬಿಗೆ ದೂರು ನೀಡಿದ್ದರು. ಶನಿವಾರ ಲಂಚ ನೀಡುವಾಗ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಿಡಿಒ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಓದಿ: ಕಾಣೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕಾಡಿನಲ್ಲಿ ಶವವಾಗಿ ಪತ್ತೆ
ಪಿಡಿಒ ಕೃಷ್ಣಪ್ಪ ಯಲ್ವಗಿ ಮೇಲೆ ಈ ಹಿಂದೆಯೂ ಕೆಲ ದೂರುಗಳು ಬಂದಿತ್ತು. ಈಗ ಸಾಕ್ಷಿ ಸಮೇತ ವಶಕ್ಕೆ ಪಡೆಯಲಾಯಿತು ಎಂದು ಎಸಿಬಿ ಡಿವೈಎಸ್ಪಿ ಶ್ರೀಕಾಂತ್ ತಿಳಿಸಿದ್ದಾರೆ.