ಕಾರವಾರ (ಉ.ಕ): ರಾಜ್ಯದಲ್ಲಿ ಮಳೆಯಬ್ಬರ ಜೋರಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾಶಯ ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆ ಜಳಾಶಯದಿಂದ ನೀರು ಹೊರಬಿಟ್ಟ ಪರಿಣಾಮ ಕಾಳಿ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನದಿ ಪಾತ್ರದಲ್ಲಿರು ಗಾಂಧಿನಗರದ ಪ್ರದೇಶಕ್ಕೆ ನೀರು ನುಗ್ಗಿದ್ದು, ಮನೆಗೆ ನೀರು ನುಗ್ಗಿ ವಸ್ತುಗಳೆಲ್ಲಾ ನೀರು ಪಾಲಾದ ಪರಿಣಾಮ ಮಹಿಳೆಯೊಬ್ಬರು ರೋಧಿಸುತ್ತಿದ್ದ ದೃಶ್ಯ ಹೃದಯಹಿಂಡುವಂತಿದೆ. ಕಾಳಿ ನದಿ ಉಕ್ಕಿ ಹರಿದ ಪರಿಣಾಮ ಮನೆ ಜಲಾವೃತಾವಾಗಿದ್ದು, ಮನೆಯಲ್ಲಿ ಕೂಡಿಟ್ಟಿದ್ದ ಬೇಳೆ, ಅಕ್ಕಿ ಸೇರಿದಂತೆ ದಿನಬಳಕೆ ವಸ್ತುಗಳು ಪ್ರವಾಹಕ್ಕೆ ಸಿಲುಕಿ ನಾಶವಾಗಿವೆ.
ಪ್ರವಾಹ ಬರುವ ನಿರೀಕ್ಷೆಯೇ ಇರದ ಹಿನ್ನೆಲೆ ದಿನ ಬಳಕೆ ವಸ್ತುಗಳ ಸ್ಥಳಾಂತರಿಸಲು ಸಮಯ ನೀಡದೆ ಗ್ರಾಮಸ್ಥರನ್ನು ಶಿಫ್ಟ್ ಮಾಡಲಾಗಿತ್ತು. ಇದೀಗ ನೀರು ಇಳಿದ ಪರಿಣಾಮ ಮನೆಗಳಿಗೆ ವಾಪಸಾಗಿದ್ದಾರೆ. ಆದರೆ ಭಾರತಿ ಪಡುವಲಕರ್ ಎಂಬುವರ ಮನೆ ಪ್ರವಾಹಕ್ಕೆ ಸಿಲುಕಿ ನೆಲಸಮವಾಗಿದ್ದು, ಮಹಿಳೆ ನಿಂತ ಜಾಗದಲ್ಲೇ ಕಣ್ಣೀರು ಹಾಕಿದ್ದಾರೆ.
ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಬೇಳೆ, ಅಕ್ಕಿ ಹಾನಿಯಾಗಿದೆ ಎಂದು ಗಳಗಳನೇ ಅಳುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಅರ್ಧಗಂಟೆ ಸಮಯ ನೀಡಿದ್ದರೂ ಎಲ್ಲಾ ಸಾಮಗ್ರಿಗಳನ್ನು ಸ್ಥಳಾಂತರ ಮಾಡುತ್ತಿದ್ದೆವು. ಕೊನೆ ಕ್ಷಣದಲ್ಲಿ ತೆರಳುವಂತೆ ಹೇಳಿದ್ದಾರೆ. ಐದು ಚೀಲ ಅಕ್ಕಿ ಇದೆ. ಇಬ್ಬರು ಮಕ್ಕಳಿದ್ದಾರೆ ಅಕ್ಕಿ, ಬೇಳೆಯನ್ನಾದರೂ ಸ್ಥಳಾಂತರಿಸಲು ಬಿಡಿ ಎಂದೇ ಆದ್ರೆ ಅವಕಾಶ ನೀಡಿಲ್ಲ. ಇದೀಗ ಎಲ್ಲ ನೀರು ಪಾಲಾಗಿದೆ. ನನ್ನ ಮಕ್ಕಳಿಗೆ ಏನು ಕೊಡಲಿ. ಸಾಲ ಮಾಡಿ ಕಟ್ಟಿದ್ದ ಮನೆ ಸಾಮಗ್ರಿ ಎಲ್ಲಾ ಹೋಗಿದೆ ಎಂದು ಮಳೆಯಲ್ಲೇ ನಿಂತು ಬೇಸರ ವ್ಯಕ್ತಪಡಿಸಿದರು.
ಓದಿ: ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲೂ ಬಿಎಸ್ವೈ ಫುಲ್ ಆ್ಯಕ್ಟಿವ್.. ಬೆಳಗಾವಿ ನೆರೆಹಾನಿ ವೀಕ್ಷಣೆಗೆ ತೆರಳಿದ ಸಿಎಂ