ETV Bharat / state

ಉ.ಕನ್ನಡ ಜಿಲ್ಲೆಗೆ ಬಿಜೆಪಿ ನೀಡಿದ ಯೋಜನೆಗಳ ಕುರಿತು ಶ್ವೇತಪತ್ರ ಹೊರಡಿಸಬೇಕು: ಆರ್.ವಿ.ದೇಶಪಾಂಡೆ

ಸಿದ್ದರಾಮಯ್ಯನವರು 16 ಕ್ಷೇತ್ರಗಳಿಗೆ 40-50 ಕೋಟಿ ರೂ. ಕೊಟ್ಟಿದ್ದಾರೆ. ಆದರೆ ಆ ಹಣ ಈಗ ಎಲ್ಲಿ ಹೋಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಯಾವೆಲ್ಲಾ ಯೋಜನೆಗಳಿಗೆ ಖರ್ಚು ಮಾಡಲಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಗ್ರಹಿಸಿದರು.

ಆರ್.ವಿ.ಡಿ ಆಗ್ರಹ
ಆರ್.ವಿ.ಡಿ ಆಗ್ರಹ
author img

By

Published : Dec 18, 2020, 10:16 PM IST

ಶಿರಸಿ: ಯಡಿಯೂರಪ್ಪ ಸರ್ಕಾರ ಉತ್ತರ ಕನ್ನಡ ಜಿಲ್ಲೆಗೆ ಏನು ಯೋಜನೆಗಳನ್ನು ಕೊಟ್ಟಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.

ಶಿರಸಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು 16 ಕ್ಷೇತ್ರಗಳಿಗೆ 40-50 ಕೋಟಿ ರೂ. ಕೊಟ್ಟಿದ್ದಾರೆ. ಆದರೆ ಆ ಹಣ ಈಗ ಎಲ್ಲಿ ಹೋಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ ಎಂದರು.

ವಿಧಾನ ಪರಿಷತ್​ನ ಗಲಾಟೆ ಬಗ್ಗೆ ಮಾತನಾಡಿದ ಅವರು, ನಮ್ಮ ಪಕ್ಷದವರೇ ಆಗಲಿ, ಯಾರೇ ಆಗಲಿ ಈ ಘಟನೆ ಸರಿಯಲ್ಲ. ಪ್ರಜಾಪ್ರಭುತ್ವಕ್ಕೆ ಮಾರಕ. ಚೇರ್ಮನ್ ಬಗ್ಗೆ ಅವಿಶ್ವಾಸದ ಅಗತ್ಯ ಏನಿತ್ತು? ಮೇಲ್ಮನೆಯಲ್ಲಿ ಪಾಸ್ ಆಗದೆ ಇದ್ದರೆ ಮತ್ತೆ ಕೆಳಮನೆಗೆ ಬಂದಾಗ ಪಾಸ್ ಮಾಡುವ ಅವಕಾಶ ಇದೆ. ಅದು ಬಿಟ್ಟು ಈ ಮಾರ್ಗದ ಅವಶ್ಯಕತೆ ಏನಿತ್ತು? ಜೆಡಿಎಸ್ ಕಾಲು, ಕೈ ಹಿಡಿಯೋದು, ಒಂದಾಗೋದು, ಗಲಾಟೆ ಎಬ್ಬಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳಿಗೆ ಒಳ್ಳೆ ಅನುಭವವಿದೆ, ಆದರೂ ಏಕೆ ಹೀಗೇ? ಇದು ಕಾಂಗ್ರೆಸ್, ಬಿಜೆಪಿ ಪ್ರಶ್ನೆಯಲ್ಲ. ಕರ್ನಾಟಕದ ಇಮೇಜ್​ನ ಪ್ರಶ್ನೆ. ಇದೆಲ್ಲಾ ಮನಸ್ಸಿಗೆ ಬಹಳ ನೋವು ನೀಡಿದೆ ಎಂದರು.

ಮಾಜಿ ಸಚಿವ ಆರ್.​ವಿ.ದೇಶಪಾಂಡೆ

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತ ಚುನಾವಣೆ. ಗ್ರಾಮಾಂತರ ಕಾರ್ಯಕರ್ತರಿಗೆ ಚುನಾವಣೆ ಸ್ಪರ್ಧೆಗೆ, ಸಮಾಜ ಸೇವೆಗೆ, ಯುವ ನಾಯಕತ್ವ ಬೆಳೆಯುವುದಕ್ಕೆ ಅವಕಾಶವಾಗಿದೆ. ನಮ್ಮಂತಹ ನಾಯಕರು ಇದರಲ್ಲಿ ಭಾಗವಹಿಸುವುದಕ್ಕಿಂತ ಆಯಾ ಗ್ರಾಪಂ ಮಟ್ಟದ ನಾಯಕರೇ ಸ್ಥಳೀಯವಾಗಿ ಯಾವ ನಾಯಕತ್ವ ಬೇಕು ಎಂಬುದನ್ನು ನಿರ್ಧರಿಸಬೇಕು ಎಂದರು.

ಚುನಾವಣೆ ಎಂದರೆ ವ್ಯಾಪಾರ, ದಂಧೆ ಆಗಬಾರದು. ಮತದಾನದ ಪಾವಿತ್ರ್ಯತೆ ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಅಭಿವೃದ್ಧಿಪರ, ಸಾಮಾಜಿಕ ನ್ಯಾಯ ನೀಡುವವರನ್ನು, ಬಡವರ ಪರ ನಿಲ್ಲುವವರನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.