ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 92 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಮತ್ತು 83 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು ಪತ್ತೆಯಾದ ಸೋಂಕಿತರ ಪೈಕಿ ಕಾರವಾರದಲ್ಲಿ 4, ಅಂಕೋಲಾ 14, ಕುಮಟಾ, ಯಲ್ಲಾಪುರದಲ್ಲಿ ತಲಾ ಓರ್ವ, ಹೊನ್ನಾವರ 6, ಭಟ್ಕಳ 2, ಶಿರಸಿ 5, ಮುಂಡಗೋಡ 8, ಹಳಿಯಾಳ 49, ಜೊಯಿಡಾದಲ್ಲಿ 2 ಮಂದಿಗೆ ಸೋಂಕು ದೃಢಪಟ್ಟಿದೆ.
ಕಾರವಾರದಲ್ಲಿ 5, ಅಂಕೋಲಾ, ಕುಮಟಾದಲ್ಲಿ ತಲಾ 8, ಹೊನ್ನಾವರ 1, ಭಟ್ಕಳ 13, ಶಿರಸಿ 14, ಮುಂಡಗೋಡ 2, ಹಳಿಯಾಳ 33 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.
ಈವರೆಗೆ ಜಿಲ್ಲೆಯ 2,119 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,351 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 23 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 745 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ.