ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 89 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಹಳಿಯಾಳ 34, ಕಾರವಾರ21, ಭಟ್ಕಳ 5, ಮುಂಡಗೋಡ 9, ಶಿರಸಿ 2, ಹೊನ್ನಾವರ 9, ಕುಮಟಾ 8 ಹಾಗೂ ಅಂಕೋಲಾದ ಓರ್ವರಿಗೆ ಇಂದು ಸೋಂಕು ಪತ್ತೆಯಾಗಿದೆ.
ಇನ್ನು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರದ 7, ಯಲ್ಲಾಪುರ 3, ಹೊನ್ನಾವರ 2, ಶಿರಸಿ 4, ಮುಂಡಗೋಡ 9, ಹಳಿಯಾಳದ 14 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 3,368 ಸೋಂಕಿತರು ಪತ್ತೆಯಾಗಿದ್ದು, 2,429 ಮಂದಿ ಗುಣಮುಖರಾಗಿದ್ದಾರೆ. 915 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಈವರೆಗೆ ಒಟ್ಟು 33 ಮಂದಿ ಸಾವನ್ನಪ್ಪಿದ್ದಾರೆ.