ಕಾರವಾರ (ಉ.ಕ): ಭಾರತೀಯ ಜನತಾ ಪಾರ್ಟಿಯ ಉತ್ತರಕನ್ನಡ ಯುವಮೋರ್ಚಾಕ್ಕೆ ಆಯ್ಕೆಯಾದ 30 ಪದಾಧಿಕಾರಿಗಳ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಲಾಯಿತು.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿದ ಯುವಮೋರ್ಚಾದ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ ಅಂಕೋಲಾ ಮಾತನಾಡಿ, ಯುವಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈಗಾಗಲೇ ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ.
ಆಹಾರ ಹಾಗೂ ದಿನಸಿ ವಸ್ತುಗಳ ಕಿಟ್ಗಳನ್ನು ವಿತರಿಸಿ, ಬಡವರಿಗೆ ಸಹಾಯ ಹಸ್ತ ನೀಡಿದ್ದಾರೆ. ಕಾರವಾರದಲ್ಲಿ ಶುಭಂ ಕಳಸ ಅವರಿಂದ ಆ್ಯಂಬುಲೆನ್ಸ್ ಚಾಲಕರಿಗೆ ತಿಂಗಳ ಕಾಲ ಊಟದ ವ್ಯವಸ್ಥೆ ಮಾಡಲಾಗಿದೆ.
ಔಷಧಿಗಳ ಅಗತ್ಯ ಇರುವವರಿಗೆ ಅದನ್ನು ಅವರ ಮನೆಗೆ ತಲುಪಿಸುವ ಕಾರ್ಯ ಮಾಡಿದ್ದೇವೆ. ಪಕ್ಷದಿಂದ ಯಾವುದೇ ಜವಬ್ದಾರಿ ನೀಡಿದರು ಯುವಮೋರ್ಚಾದ ಪದಾಧಿಕಾರಿಗಳು ಮಾಡಲು ಸಿದ್ಧರಾಗಿದ್ದಾರೆ ಎಂದರು.