ETV Bharat / state

ಕೈಗಾ ಸೈಟ್ ಡೈರೆಕ್ಟರ್ ಗೆ ಆನ್ಲೈನ್ ಮೂಲಕ 3 ಲಕ್ಷ ರೂ. ವಂಚನೆ - 3 lakh have been frauded to the kaiga site director

ವಿಮಾನ ಟಿಕೆಟ್ ದರ ಮರುಪಾವತಿಯಾಗದ್ದನ್ನು ಆನ್ಲೈನ್ ಮೂಲಕ ವಿಚಾರಿಸಲು ಹೋಗಿ ಎನ್ ಪಿಸಿಐಎಲ್ ಕೈಗಾದ ಸೈಟ್ ಡೈರೆಕ್ಟರ್ ಒಬ್ಬರು ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಕಾರವಾರ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3-lakh-have-been-frauded-to-the-kaiga-site-director
ಕೈಗಾ ಸೈಟ್ ಡೈರೆಕ್ಟರ್ ಗೆ ಆನ್ಲೈನ್ ಮೂಲಕ 3 ಲಕ್ಷ ವಂಚನೆ: ಪ್ರಕರಣ ದಾಖಲು
author img

By

Published : Jun 12, 2022, 5:16 PM IST

ಕಾರವಾರ: ವಿಮಾನ ಟಿಕೆಟ್ ದರ ಮರುಪಾವತಿಯಾಗದ್ದನ್ನು ಆನ್ಲೈನ್ ಮೂಲಕ ವಿಚಾರಿಸಲು ಹೋಗಿ ಎನ್ ಪಿಸಿಐಎಲ್ ಕೈಗಾದ ಸೈಟ್ ಡೈರೆಕ್ಟರ್ ಒಬ್ಬರು ಬರೋಬ್ಬರಿ 3 ಲಕ್ಷ ರೂ ಹಣ ಕಳೆದುಕೊಂಡಿರುವ ಬಗ್ಗೆ ಕಾರವಾರ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನ್ ಪಿಸಿಐಎಲ್ ಕೈಗಾದ ಸೈಟ್ ಡೈರೆಕ್ಟರ್ ರಾಜೇಂದ್ರ ಕುಮಾರ್ ಗುಪ್ತಾ ಹಣ ಕಳೆದುಕೊಂಡವರು.

ಮೆ 29 ರಂದು ಗೋವಾದಿಂದ ಜೈಪುರಗೆ ಪ್ರಯಾಣಿಸುವ ಇಂಡಿಗೋ ಏರ್​ಲೈನ್ಸ್ ನಲ್ಲಿ ಟಿಕೆಟನ್ನು ರಾಜೇಂದ್ರ ಕುಮಾರ್​ ಬುಕ್​ ಮಾಡಿದ್ದರು. ಆದರೆ ವಿಮಾನ ಹಾರಾಟ ರದ್ದಾಗಿದ್ದು, ಜೂ.5ರವರೆಗೂ ಹಣ ಮರು ಪಾವತಿಯಾಗದ ಹಿನ್ನೆಲೆಯಲ್ಲಿ ಜೂ.5 ರಂದು ಇಂಡಿಗೋ ಏರ್​ಲೈನ್ಸ್ ಅವರ ಕಸ್ಟಮರ್ ಕೇರ್ ನಂಬರನ್ನು ಗೂಗಲ್ ನಲ್ಲಿ ಹುಡುಕಿದಾಗ ಅವರಿಗೆ ಇಂಡಿಗೋ ಏಕ್ಸಿಕ್ಯೂಟಿವ್ ಅಧಿಕಾರಿ ಎಂದು ಇರುವ ಮೊಬೈಲ್ ಸಂಖ್ಯೆ ಸಿಕ್ಕಿದೆ.

ಇದಕ್ಕೆ ಕರೆ ಮಾಡಿ ರದ್ದಾಗಿರುವ ಫ್ಲೈಟ್ ಟಿಕೆಟ್ ಹಣವನ್ನು ಮರು ಪಾವತಿಸುವಂತೆ ಕೋರಿಕೊಂಡಾಗ ಕರೆ ಸ್ವೀಕರಿಸಿದ ವ್ಯಕ್ತಿಯು ತಾವು ಸಹಾಯ ಮಾಡುವುದಾಗಿ ಹೇಳಿ ಅವರ ಮೊಬೈಲಿನಲ್ಲಿ ಅಪ್ಲಿಕೇಶನ್ ಒಂದನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ್ದರು. ಬಳಿಕ ಅವರು ಸೂಚಿಸಿದಂತೆ ತಮ್ಮ ಎಸ್ ಬಿಐ ಬ್ಯಾಂಕ್ ಖಾತೆಯ ಇಂಟರ್ನೆಟ್ ಬ್ಯಾಂಕಿಗೆ ಲಾಗಿನ್ ಆಗುತ್ತಿದ್ದಂತೆ ಅವರ ಬ್ಯಾಂಕ್ ಖಾತೆಯಿಂದ ರೂ. 1 ಲಕ್ಷ ಹಾಗೂ ಮತ್ತೊಮ್ಮೆ 2 ಲಕ್ಷ ಹೀಗೆ ಒಟ್ಟು 3 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಸದ್ಯ ಆರೋಪಿ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಯುವತಿ ಮೇಲೆ ಮಸಿ ದಾಳಿ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.