ETV Bharat / state

2.1 ಕೆಜಿ ಚಿನ್ನದ ಬಿಸ್ಕೆಟ್ ಅಕ್ರಮ ಸಾಗಾಟ: ಆರೋಪಿ ಅರೆಸ್ಟ್​

ಅಕ್ರಮವಾಗಿ ಚಿನ್ನದ ಬಿಸ್ಕೆಟ್‌ಗಳನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನ ದಾಬೋಲಿಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಅಲಿ ಅಕ್ಬರ್ ಅಬೂಬಕ್ಕರ್ (45) ಬಂಧಿತ ಆರೋಪಿ.‌

gold biscuits seized
ಚಿನ್ನದ ಬಿಸ್ಕೆಟ್
author img

By

Published : Mar 14, 2021, 7:35 AM IST

ಭಟ್ಕಳ: ಲಕ್ಷಾಂತರ ರೂ. ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನ ದಾಬೋಲಿಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಅಲಿ ಅಕ್ಬರ್ ಅಬೂಬಕ್ಕರ್ (45) ಬಂಧಿತ ಆರೋಪಿ. ದುಬೈನಿಂದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಈತನಿಂದ ಬರೋಬ್ಬರಿ 2.1 ಕೆಜಿ ಚಿನ್ನದ ಬಿಸ್ಕೆಟ್ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆದಾಯ ತೆರಿಗೆ ಗುಪ್ತಚರ ನಿರ್ದೇಶನಾಲಯ ತಿಳಿಸಿದೆ.

ಆರೋಪಿ ಅಕ್ಬರ್ ಅಬೂಬಕರ್‌ನನ್ನು ವಶಕ್ಕೆ ಪಡೆದ ಅಧಿಕಾರಿಗಳಿಗೆ ಆತನ ಬಳಿ ಸುಮಾರು 18 ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಸದ್ಯ ಪತ್ತೆಯಾಗಿರುವ ಚಿನ್ನದ ಮೌಲ್ಯ 97 ಲಕ್ಷ ರೂ. ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಓದಿ: ಅಕ್ರಮ ಚಿನ್ನ ಸಾಗಾಣಿಕೆ : ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.