ಕಾರವಾರ (ಉತ್ತರ ಕನ್ನಡ): ಸಿದ್ದಾಪುರ ತಾಲೂಕಿನ ಕವಂಚೂರು ಗ್ರಾಮದ ಹಿತ್ಲಕೊಪ್ಪದ ಶಾಲೆಯ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ 13 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 16 ಮೊಬೈಲ್, 6 ಬೈಕ್ ಹಾಗೂ 3.17 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿತ್ಲಕೊಪ್ಪದಲ್ಲಿರುವ ಮಲೆನಾಡು ಪ್ರೌಢ ಶಾಲೆ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದವರ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು.
ಇದನ್ನೂ ಓದಿ: ರಸ್ತೆ ಬದಿ ರಕ್ತಚಂದನ ಮಾರಾಟ: ಆರೋಪಿ ಅಂದರ್, 240 ಕೆಜಿ ರೆಡ್ ಸ್ಯಾಂಡಲ್ ಪೊಲೀಸರ ವಶಕ್ಕೆ!
ಖಚಿತ ಮಾಹಿತಿ ಮೇರೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದಂತೆ ಹೊನ್ನಾವರ ಠಾಣೆಯ ಪಿ.ಐ, ಪಿ.ಎಸ್.ಐ ಹಾಗೂ ಮಂಕಿ ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ದಾಳಿ ನಡೆಸಿ 13 ಜನರನ್ನು ಬಂಧಿಸಿದೆ. ಈ ವೇಳೆ, ಒಟ್ಟು 3.17ಲಕ್ಷ ರೂ. ಹಣ, 16 ಮೊಬೈಲ್ಗಳು, 6 ಬೈಕ್ಗಳು, ಇಸ್ಪೀಟ್ ಕಾರ್ಡ್ಗಳು ಹಾಗೂ 2 ಇಸ್ಪೀಟ್ ಕಾರ್ಡ್ಗಳ ಹೊಸ ಪ್ಯಾಕ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ. 13 ಮಂದಿ ಮತ್ತು ದಾಳಿ ವೇಳೆ ಓಡಿ ಹೋದವರ ವಿರುದ್ಧವೂ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.