ETV Bharat / state

ಉತ್ತರ ಕನ್ನಡದಲ್ಲೂ ಇದ್ದಾರೆ ಬ್ರಿಟನ್​ನಿಂದ ಬಂದ 12 ಮಂದಿ: ಜಿಲ್ಲಾಧಿಕಾರಿ ಮಾಹಿತಿ - ಬ್ರಿಟನ್​ನಿಂದ ಬಂದವರಿಗೆ ಆರ್​ಟಿಪಿಸಿಆರ್ ಟೆಸ್ಟ್

ಬ್ರಿಟನ್​ನಿಂದ ಜಿಲ್ಲೆಗೆ ಒಟ್ಟು 12 ಮಂದಿ ಆಗಮಿಸಿದ್ದು, ಎಲ್ಲರ ಮೇಲೆ ನಿಗಾ ಇಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

12 people arrived from Briten to Uttara Kannada
ಉತ್ತರ ಕನ್ನಡಕ್ಕೆ ಬ್ರಿಟನ್​ನಿಂದ 12 ಮಂದಿ ಆಗಮನ
author img

By

Published : Dec 23, 2020, 9:50 PM IST

ಕಾರವಾರ: ಬ್ರಿಟನ್​ನಿಂದ ಆಗಮಿಸಿದವರ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲೂ 12 ಮಂದಿ ಇದ್ದು, ಎಲ್ಲರಿಗೂ ಕ್ವಾರಂಟೈನ್ ಇರಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶ್​ ಕುಮಾರ್ ತಿಳಿಸಿದ್ದಾರೆ.

ಬ್ರಿಟನ್​ನಿಂದ ವಾಪಸಾದವರ ಪಟ್ಟಿ ಪರಿಶೀಲಿಸಿದಾಗ ಬೇರೆ ಬೇರೆ ದಿನಾಂಕಗಳಂದು ಬಂದ ಒಟ್ಟು 12 ಮಂದಿ ಇರುವ ಬಗ್ಗೆ ಗೊತ್ತಾಗಿದೆ. ಈ ಪೈಕಿ ಮುಂಡಗೋಡದ 8, ದಾಂಡೇಲಿಯ 2 ಹಾಗೂ ಕುಮಟಾದ ಇಬ್ಬರು ಇದ್ದಾರೆ. ಆದರೆ, ಎಲ್ಲರೂ ಈ ಹಿಂದೆಯೇ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿ ನೆಗೆಟಿವ್ ಬಂದಿದೆ. ಇದೀಗ 12 ಮಂದಿಯನ್ನು ಮತ್ತೆ ಸಂಪರ್ಕಿಸಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಲಾಗುವುದು ಎಂದರು.

ಇದನ್ನೂ ಓದಿ : ಇಂಗ್ಲೆಂಡ್​ನಿಂದ ಹಾಸನಕ್ಕೆ ಆಗಮಿಸಿದ್ದ ಇಬ್ಬರ ಕೊರೊನಾ ವರದಿ ನೆಗೆಟಿವ್: ನಿಟ್ಟುಸಿರು ಬಿಟ್ಟ ಜಿಲ್ಲಾಡಳಿತ

ಎಲ್ಲರಿಗೂ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗುವುದು ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.