ETV Bharat / state

'ಕಂಬನಿದುಂಬಿ ಹೋದೆಯಾ ದೂರ..' ಯುವರತ್ನನಿಗೆ ಯಕ್ಷಗಾಯನ ನಮನ

"ಚಿನ್ನದ ಪ್ರತಿಭೆಯ ಕಣ್ಮರೆಯಲಿ ಜಗ ಮುಳುಗಿದೆ ನೋವಿನಲಿ" ಎಂದು ಭಾವಪೂರ್ಣ ಸಾಹಿತ್ಯವುಳ್ಳ ಯಕ್ಷಗೀತೆ ಮೂಲಕ ಪುನೀತ್ ರಾಜ್​​ಕುಮಾರ್​ಗೆ ಉಡುಪಿಯಲ್ಲಿ ಅಂತಿಮ ನಮನ ಸಲ್ಲಿಸಲಾಗಿದೆ.

Yakshagana artists pay last tribute to Puneeth Rajkumar via a song

author img

By

Published : Oct 31, 2021, 11:07 AM IST

ಉಡುಪಿ: ಅಗಲಿದ ಕನ್ನಡದ ಯುವರತ್ನ ಪುನೀತ್ ರಾಜ್​​ಕುಮಾರ್​ಗೆ ಉಡುಪಿಯಲ್ಲಿ ಯಕ್ಷಗಾಯನ ಅಥವಾ ಯಕ್ಷಗೀತೆ ಮೂಲಕ ಅಂತಿಮ ನಮನ ಸಲ್ಲಿಸಲಾಗಿದೆ.

ಅಗಲಿದ ಯುವರತ್ನನಿಗೆ ಯಕ್ಷಗಾಯನದ ಮೂಲಕ ಅಂತಿಮ ನಮನ

ಯಕ್ಷಗಾನದ ಅಭಿಮಾನಿಯಾಗಿದ್ದ ಪುನೀತ್ ರಾಜಕುಮಾರ್ ಹಲವು ಬಾರಿ ಯಕ್ಷಗಾನದ ಹಿರಿಮೆಗೆ ಮನಸೋತು ಮಾತನಾಡಿದ್ದರು. ಆದರೆ ಇದೀಗ ಜೀವನ ಪಯಣ ನಿಲ್ಲಿಸಿದ ಅಪ್ಪುಗೆ ಭಾಗವತ, ಹಿರಿಯ ಕಲಾವಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾಹಿತ್ಯ ಬರೆದು ಈ ಗೀತೆಯನ್ನು ಅರ್ಪಣೆ ಮಾಡಿದ್ದಾರೆ. ತೆಕ್ಕಟ್ಟೆಯ ಯಶಸ್ವಿ ಕಲಾವೃಂದ ಪದ್ಯವನ್ನು ಮಲ್ಯಾಡಿ ವಾಹಿನಿಯಲ್ಲಿ ಪ್ರಸ್ತುತಪಡಿಸಿದೆ.

ಇದನ್ನೂ ಓದಿ: ಭೂತಾಯಿಯ ಮಡಿಲು ಸೇರಿದ ಭಾಗ್ಯವಂತ: ಮತ್ತೆ ಹುಟ್ಟಿ ಬನ್ನಿ ಅಪ್ಪು

"ಕಂಬನಿದುಂಬಿ ಹೋದೆಯಾ ದೂರ ಕನ್ನಡ ರಾಜಕುಮಾರ.. ಅಂಬರದಲ್ಲಿ ಚಿರತಾರಕೆಯಾದೆಯಾ ಚಂದನವನಮಾಲಾ", "ಕಡಲೊಳು ಸಂಜೆಗೆ ಮುಳುಗುವ ನೇಸರ ನಡುಹಗಲಲಿ ಮುಳುಗಿ ಕತ್ತಲೆ ನೀಡಿದ", "ಚಿನ್ನದ ಪ್ರತಿಭೆಯ ಕಣ್ಮರೆಯಲಿ ಜಗ ಮುಳುಗಿದೆ ನೋವಿನಲಿ" ಹೀಗೆ ಭಾವಪೂರ್ಣ ಸಾಹಿತ್ಯವುಳ್ಳ ಈ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.