ಉಡುಪಿ: ಇಂದು ಬೆಳಿಗ್ಗೆಯಿಂದ ವೈನ್ ಸ್ಟೋರ್ ಗಳು, ಎಂಆರ್ ಪಿ ಮದ್ಯದಂಗಡಿಗಳು ಆರಂಭವಾಗಿವೆ. ಬೆಳಗ್ಗಿನಿಂದಲೇ ಮದ್ಯದಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಜನರು ನಿಂತಿದ್ದಾರೆ.
ಲಾಕ್ ಡೌನ್ಗೂ ಮೊದಲು ಮಣಿಪಾಲದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ಲೈಫ್ ಎಂಜಾಯ್ ಮಾಡ್ತಾ ಇದ್ರು. ಆದ್ರೆ ಲಾಕ್ ಡೌನ್ ನಂತರ ಈ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಬಂಧಿಯಾಗಿದ್ದಾರೆ. ಊರಿಗೆ ಹೋಗಲಾಗದೆ ಇಲ್ಲೇ ಸಿಕ್ಕಿಬಿದ್ದಿರುವ ಹೊರ ರಾಜ್ಯದ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಎಣ್ಣೆ ಇಲ್ಲದೇ ಪರದಾಡಿದ್ದರು. ಪ್ರತಿ ದಿನ ಪಾನ ಕೂಟಗಳಲ್ಲಿ ಭಾಗವಹಿಸುತ್ತಿದ್ದ ವಿದ್ಯಾರ್ಥಿಗಳಿಗೆ ಮಾಲ್ ಸಿಗದೆ ಸಾಕಷ್ಟು ಸಮಸ್ಯೆಯಾಗಿತ್ತು.
ಆದರೆ ಇಂದು ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ ಹಿನ್ನೆಲೆ ಬೆಳ್ಳಂಬೆಳಗ್ಗೆ ಸರದಿ ಸಾಲಿನಲ್ಲಿ ನಿಂತು ವಿದ್ಯಾರ್ಥಿನಿಯರು ಕೂಡ ಮದ್ಯ ಖರೀದಿಸಿದರು.