ಉಡುಪಿ:ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯನ್ನು ಮತ್ತೆ ಆರಂಭಿಸಲು ಜಿಲ್ಲಾಡಳಿತ ಹಸಿರುನಿಶಾನೆ ತೋರಿಸಿದೆ.
ಈಗಾಗಲೇ ಮರಳು ಸಾಗಾಟ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಒಂದು ಕಡೆ ಕೊರೊನಾ ಸಂಕಷ್ಟ ಮತ್ತೊಂದು ಕಡೆ ಮರಳುಗಾರಿಕೆ ನಿಷೇಧದಿಂದ ಪರದಾಡುತ್ತಿದ್ದ ಮರಳು ಸಾಗಾಟದ ಕಾರ್ಮಿಕರಿಗೆ ಹಾಗೂ ಲಾರಿ ಮಾಲೀಕರಿಗೆ ಸದ್ಯ ದುಡಿಮೆಗೊಂದು ದಾರಿ ಸಿಕ್ಕಂತಾಗಿದೆ.
ಅಲ್ಲದೇ ಮರಳಿನ ಅಭಾವದಿಂದ ದೊಡ್ಡ ದೊಡ್ಡ ಕಟ್ಟಡಗಳ ಕೆಲಸಗಳು ಕೂಡ ನಿಂತಿತ್ತು. ಸದ್ಯ ಮರಳು ಲಭ್ಯವಾಗುವ ಕಾರಣದಿಂದ ಕಟ್ಟಡ ಕೆಲಸಗಳು ವೇಗ ಪಡೆದುಕೊಂಡು ಕೂಲಿ ಕಾರ್ಮಿಕರಿಗೂ ಕೆಲಸ ಸಿಗುವಂತಾಗಿದೆ. ಇನ್ನೂ ವಾಹನ ಸಾಲದ ಕಂತು ತುಂಬುವುದಕ್ಕೆ ಸರ್ಕಾರ ಆರು ತಿಂಗಳ ಅವಧಿಯನ್ನು ನೀಡಿದೆ. ಆದ್ರೆ ಇಷ್ಟು ಕಡಿಮೆ ಅವಧಿಯಲ್ಲಿ ಸಾಲ ಮರುಪಾವತಿ ಕಷ್ಟ ಸಾದ್ಯ ಇನ್ನಷ್ಟು ಸಮಯಾವಕಾಶ ನೀಡಬೇಕು ಎನ್ನುವುದು ಮರಳು ಸಾಗಾಟ ಲಾರಿ ಮಾಲೀಕರ ಕಾರ್ಮಿಕರ ಒತ್ತಾಯ.