ಉಡುಪಿ: ನದಿಗೆ ಬಿದ್ದು ಕಾಣೆಯಾಗಿದ್ದ ಇಬ್ಬರು ಯುವಕರ ಮೃತದೇಹಗಳು ಇಂದು ಪತ್ತೆಯಾಗಿವೆ. ಮೃತರನ್ನು ಅನಾಸ್(16), ಶ್ರೇಯಸ್ (18) ಎಂದು ಗುರುತಿಸಲಾಗಿದೆ.
ಉಗ್ಗೇಲುಬೆಟ್ಟು ಮಡಿಸಾಲು ಬಳಿ ಮಂಗಳವಾರ ನದಿಗೆ ಈಜಲು ಮೂವರು ಯುವಕರು ತೆರಳಿದ್ದರು. ಈ ಪೈಕಿ ಇಬ್ಬರು ನೀರುಪಾಲಾಗಿದ್ದರು. ಒಬ್ಬ ಯುವಕ ಅಪಾಯದಿಂದ ಪಾರಾಗಿದ್ದ, ಬಳಿಕ ಯುವಕ ನೀರುಪಾಲಾದವರ ಬಗ್ಗೆ ಮಾಹಿತಿ ನೀಡಿದ್ದನು.
ಈ ಸಂಬಂಧ ಕಾಣೆಯಾದ ಬಗ್ಗೆ ಯುವಕರ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಿನ್ನೆ ಸಂಜೆಯಿಂದ ಈಜುಪಟು ಈಶ್ವರ್ ಅವರನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ನದಿಯಲ್ಲಿ ಇಬ್ಬರ ಯುವಕರ ಶವಗಳು ಪತ್ತೆಯಾಗಿವೆ.