ಉಡುಪಿ: ರಾಜ್ಯಾದ್ಯಂತ ಲಾಕ್ಡೌನ್ ತೆರವು ಆಗುತ್ತಿದ್ದಂತೆ ಉಡುಪಿ ಸೀಲ್ಡೌನ್ ರೂಲ್ಸ್ ನಲ್ಲಿ ಸಡಿಲಿಕೆಯಾಗಿದೆ.
ಇಂದಿನಿಂದ ಬಸ್ ಸಂಚಾರ ಆರಂಭವಾಗಲಿದ್ದು, ಜಿಲ್ಲಾದ್ಯಂತ ಖಾಸಗಿ, ಸಿಟಿ ಬಸ್ ರಸ್ತೆಗಿಳಿಯಲಿವೆ. ಬಸ್ ನಲ್ಲಿ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶವಿದ್ದು, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ನಿಯಮ ಕಡ್ಡಾಯ ಪಾಲಿಸಬೇಕು. ಕಾನೂನು ಮೀರಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು.
ಜಿಲ್ಲೆಯೊಳಗೆ ಅನಾವಶ್ಯಕ ಓಡಾಟ ಮಾಡಬಾರದು. ಜಿಲ್ಲಾ ಗಡಿಯಲ್ಲೂ ತುರ್ತು ಕಾರಣವಿದ್ದರೆ ಓಡಾಟ ಮಾಡಬಹುದು. ಗಡಿಯಲ್ಲಿ ಚೆಕ್ ಪೋಸ್ಟ್ ಮುಂದುವರೆಯಲಿದೆ. ಅನಾವಶ್ಯಕವಾಗಿ ಓಡಾಡಿ ಕೊರೊನಾ ಹರಡಿಸದಂತೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಜನರಲ್ಲಿ ಮನವಿ ಮಾಡಿದ್ದಾರೆ.