ETV Bharat / state

ಥ್ರೋ ಬಾಲ್ ಚಾಂಪಿಯನ್‌ಶಿಪ್ ಗೆದ್ದ ಭಾರತ ತಂಡದಲ್ಲಿ ಮೂವರು ಉಡುಪಿ ಕುವರಿಯರು

ನೇಪಾಳದಲ್ಲಿ ನಡೆದ ಥ್ರೋ ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾರತ ಗೆಲುವು ಸಾಧಿಸಿ, ಚಿನ್ನ ಮುಡಿಗೇರಿಸಿಕೊಂಡಿದೆ. ಈ ತಂಡದಲ್ಲಿ ಉಡುಪಿ ಜಿಲ್ಲೆಯ ಕಾಪುವಿನ ಮೂವರು ಆಟಗಾರ್ತಿಯರು ಭಾಗವಹಿಸಿದ್ದರು ಅನ್ನೋದು ವಿಶೇಷ.

India wins the Indo-Nepal Throw Ball Championship
ಇಂಡೊ – ನೇಪಾಲ್ ಥ್ರೋ ಬಾಲ್ ಚಾಂಪಿಯನ್ ಶಿಪ್ ದಲ್ಲಿ ಭಾರತಕ್ಕೆ ಗೆಲುವು
author img

By

Published : Nov 15, 2022, 2:15 PM IST

Updated : Nov 15, 2022, 2:24 PM IST

ಉಡುಪಿ: ನೇಪಾಳದಲ್ಲಿ ನಡೆದ ಇಂಡೋ–ನೇಪಾಲ್ ಥ್ರೋ ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಈ ತಂಡದಲ್ಲಿ ಉಡುಪಿ ಜಿಲ್ಲೆಯ ಮೂವರು ಆಟಗಾರ್ತಿಯರು ಭಾಗವಹಿಸಿದ್ದು ವಿಶೇಷವಾಗಿದೆ. ನವೆಂಬರ್‌ 12 ಮತ್ತು 13ರಂದು ಕ್ರೀಡಾಕೂಟ ನಡೆದಿತ್ತು.

ಕಾಪು ತಾಲೂಕಿನ ಆಟಗಾರ್ತಿಯರು: ಶಿರ್ವದ ಶಮಿತಾ, ಧನ್ಯ ಹಾಗು ಮುದರಂಗಡಿಯ ರಶ್ಮಿ ಥ್ರೋ ಬಾಲ್ ಚಾಂಪಿಯನ್‌ಶಿಪ್ ತಂಡದಲ್ಲಿದ್ದರು.

ಫೈನಲ್‌ ಪಂದ್ಯಾಟದಲ್ಲಿ ಮೊದಲ ಸೆಟ್‌ನಲ್ಲಿ ಭಾರತ 20 ಮತ್ತು ನೇಪಾಳ 25 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. 2ನೇ ಸೆಟ್‌ನಲ್ಲಿ 25 ಮತ್ತು ನೇಪಾಳ 15, ಅಂತಿಮ ಸೆಟ್‌ನಲ್ಲಿ ಭಾರತ 25 ಮತ್ತು ನೇಪಾಳ 18 ಅಂಕ ಗಳಿಸಿತ್ತು. ಪ್ರಶಸ್ತಿ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸೌಂದರ್ಯ ಅತ್ಯುತ್ತಮ ಆಟಗಾರ್ತಿಯಾಗಿ ಆಯ್ಕೆಯಾದರೆ, ಬೆಸ್ಟ್ ಸ್ಮ್ಯಾಶರ್ ಗೌರವಕ್ಕೆ ಶಮಿತಾ ಪಾತ್ರರಾದರು.

ಇದನ್ನೂ ಓದಿ: ಟಿಟಿ ಮಾಂತ್ರಿಕ ಶರತ್ ಕಮಲ್​ 'ಖೇಲ್ ರತ್ನ'; 25 ಕ್ರೀಡಾಪಟುಗಳಿಗೆ 'ಅರ್ಜುನ' ಪ್ರಶಸ್ತಿ

Last Updated : Nov 15, 2022, 2:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.