ETV Bharat / state

ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯಿಂದ ಉಡುಪಿಯಲ್ಲೊಂದು ವಿಶೇಷ ಮದುವೆ

ಉಡುಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಿವಾಹವನ್ನು ಏರ್ಪಡಿಸಲಾಗಿತ್ತು.

ಉಡುಪಿಯಲ್ಲಿ ಅಪರೂಪದ ಮದುವೆ
ಉಡುಪಿಯಲ್ಲಿ ಅಪರೂಪದ ಮದುವೆ
author img

By

Published : Oct 28, 2022, 10:02 PM IST

ಉಡುಪಿ: ಇದೊಂದು ಅಪರೂಪದ ಮದುವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಮದುವೆಯ ಪೌರೋಹಿತ್ಯ ವಹಿಸಿಕೊಂಡಿತ್ತು. ಮದುವೆ ನಡೆದಿದ್ದು ಉಡುಪಿಯ ರಾಜ್ಯ ಮಹಿಳಾ ನಿಲಯದಲ್ಲಿ.

ಮಹಿಳಾ ನಿಲಯ 10 ವರ್ಷಗಳ ಬಳಿಕ ಇಂತಹದ್ದೊಂದು ಮದುವೆ ನಡೆಸಿದೆ. ಜಯಶ್ರೀ (25) ಇಲ್ಲಿನ ಸ್ಟೇಟ್ ಹೋಮ್​ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಿದ್ದರು. ಕೌಟುಂಬಿಕ ಸಮಸ್ಯೆಯ ಕಾರಣ, ಈಕೆ ಸ್ಟೇಟ್ ಹೋಮ್​ಗೆ ಬಂದಿದ್ದಳು. ಇಲ್ಲಿ‌ ನಾಲ್ಕು ವರ್ಷಗಳಲ್ಲಿ ವಿವಿಧ ಕೌಶಲ್ಯ ಮತ್ತು ತರಬೇತಿ ಪಡೆದ ಬಳಿಕ ಸಮಾಜದ ಮುಖ್ಯವಾಹಿನಿಗೆ ಬರುವ ಮನಸಾಗಿದೆ.

ಉಡುಪಿಯಲ್ಲಿ ಅಪರೂಪದ ಮದುವೆ

ಈಕೆಗೆ ಹಲವು ನೆಂಟಸ್ತಿಕೆಗಳು‌ ಬಂದಿದ್ದವು. ಮಹಿಳಾ ನಿಲಯದವರು ಒಂದು ಸಮಿತಿ ರಚಿಸಿ ಸೂಕ್ತ ವರನನ್ನು ಹುಡುಕಿತು. ವರನ ಹಿನ್ನೆಲೆ ಮತ್ತು‌ ಪೂರ್ವಾಪರ ಅರಿತು ದಾವಣಗೆರೆಯ ಮಲ್ಲೇಶ್ (29) ಜೊತೆ ವಿವಾಹಕ್ಕೆ ವ್ಯವಸ್ಥೆ ಮಾಡಿತು. ಇವತ್ತು ಇವರಿಬ್ಬರು ಜಿಲ್ಲಾಧಿಕಾರಿ ಕೂರ್ಮಾ ರಾವ್, ಶಾಸಕ ರಘುಪತಿ ಭಟ್ ಮತ್ತು ಸೀಮಿತ ಬಂಧುಗಳ ಸಮ್ಮುಖದಲ್ಲಿ ಸತಿ ಪತಿಗಳಾದರು.

ವಧುವಿಗೆ ಸರ್ಕಾರದ ಕಡೆಯಿಂದ 15 ಸಾವಿರ ರೂ ಮತ್ತು ದಾನಿಗಳ ನೆರವಿನಿಂದ 50 ಸಾವಿರದಷ್ಟು ಹಣವನ್ನು ಬ್ಯಾಂಕ್​ನಲ್ಲಿ ಠೇವಣಿ ಇರಿಸಲಾಗಿದೆ. ಕೃಷಿಕನಾಗಿರುವ ಮಲ್ಲೇಶ್ ಮತ್ತು ಜಯಶ್ರೀ ದಾಂಪತ್ಯ ಸುಖಕರವಾಗಿರಲಿ ಎಂದು ಮದುವೆಗೆ ಬಂದವರು ಹಾರೈಸಿದರು.

ಇದನ್ನೂ ಓದಿ: ಮೂರಡಿ ಎತ್ತರದ ಯುವಕನಿಗೆ ಕೂಡಿ ಬಂದ ಕಂಕಣ ಭಾಗ್ಯ: ಪಿಎಂ, ಸಿಎಂರನ್ನೂ ಮದುವೆಗೆ ಆಹ್ವಾನಿಸಲಿರುವ ಮದುಮಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.