ಉಡುಪಿ: ಮೀನುಗಾರರಿಗೆ ಐದು ಸಾವಿರ ಮನೆ ಮಂಜೂರಾತಿ ಮಾಡಲಾಗಿದೆ. ಕರಾವಳಿಯ ಕುಚ್ಚಲಕ್ಕಿ ಬೇಡಿಕೆಯ ಬಗ್ಗೆ ಮಂಜೂರಾತಿಯನ್ನು ಕೊಟ್ಟು ಉಡುಪಿಗೆ ಬಂದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಿಲ್ಲೆಯ ಕಾಪುವಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕರಾವಳಿಯ ಎಂಟು ಬಂದರು ಅಭಿವೃದ್ಧಿ ಆಗಲಿದೆ. ನೂರು ಹೈಸ್ಪೀಡ್ ಬೋಟ್ ಮಂಜೂರು ಮಾಡಲಾಗಿದೆ. ಮೀನುಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮೀನುಗಾರರು ಕೇವಲ ಶೇ. 10 ಹೂಡಿಕೆ ಮಾಡಿದರೆ ಸಾಕು ಎಂದು ಹೇಳಿದರು.
ಪೆಟ್ರೋಲಿಯಂ ಎಂಜಿನ್ ಗೆ ಸಬ್ಸಿಡಿ : ನಾಡದೋಣಿ ದೋಣಿಗೆ ಪೆಟ್ರೋಲ್ ಎಂಜಿನ್ ಅಳವಡಿಸಿದರೆ ಸರಕಾರ ಪೆಟ್ರೋಲಿಯಂ ಎಂಜಿನ್ ಗೆ ಸಬ್ಸಿಡಿ ಕೊಡಲಾಗುತ್ತದೆ. ಕಾಂಗ್ರೆಸ್ 50 ವರ್ಷದಿಂದ ಕೊಡದ ಎಸ್ಸಿ ಎಸ್ಟಿ ಮೀಸಲಾತಿ ನಾವು ಕೊಟ್ಟಿದ್ದೇವೆ. ಸಾಮಾಜಿಕ ಕ್ರಾಂತಿಯ ನಿಲುವನ್ನು ಬಿಜೆಪಿ ತೆಗೆದುಕೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ನಿಂದ ಎಲ್ಲಾ ರಂಗದಲ್ಲೂ ಭ್ರಷ್ಟಾಚಾರ : ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗದಲ್ಲೂ ಭ್ರಷ್ಟಾಚಾರ ಮಾಡಿತ್ತು. ಅನ್ನಭಾಗ್ಯದಲ್ಲಿ ಕನ್ನ ಹೊಡೆದಿದ್ದಾರೆ. ಸೋಲಾರ್ ವಿದ್ಯುತ್ ನಲ್ಲೂ ಭ್ರಷ್ಟಾಚಾರ. ಬಿಡಿಎ, ನೀರಾವರಿಯಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಎಸ್ಸಿ ಎಸ್ಟಿ ಮೀಸಲಾತಿ ಕೊಡಲು ನಿಮಗೆ ಧಮ್ ಇರಲಿಲ್ಲ. ವಿರೋಧ ಪಕ್ಷವನ್ನು ವಿಶ್ವಾಸಕ್ಜೆ ಪಡೆದು ಹೆಚ್ಚಿನ ಮೀಸಲಾತಿ ಕೊಟ್ಟೆವು. ಆದರೆ, ಈಗ ತಕರಾರು ತೆಗಿತಿದಾರೆ, ಇದು ಕಾಂಗ್ರೆಸ್ ನೀತಿ ಎಂದು ಕಾಂಗ್ರೆಸ್ನ್ನು ಟೀಕಿಸಿದರು.
ಪ್ರಧಾನಿ ಮೋದಿ ಬಿಪಿಎಲ್ ಕೆಳಗಿರುವ ಬಡವರಿಗೆ ಮೀಸಲಾತಿ ಕೊಟ್ಟಿದ್ದರು. ಇದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದೊಂದು ಸಾಮಾಜಿಕಕ್ರಾಂತಿಯಾಗಲಿದೆ ಎಂದು ಸಿಎಂಹೇಳಿದರು.
ಇದನ್ನೂ ಓದಿ : ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಬಿಎಂಆರ್ಸಿಎಲ್ ಸಂಸ್ಥೆಗೆ ಅತ್ಯುತ್ತಮ ನಗರ ಸಾರಿಗೆ ಶ್ರೇಷ್ಠತಾ ಪ್ರಶಸ್ತಿ..