ಉಡುಪಿ: ಶ್ರೀ ಅದಮಾರು ಮಠದಿಂದ ಪ್ರಧಾನ ಮಂತ್ರಿ ಕೇಂದ್ರ ಪರಿಹಾರ ನಿಧಿಗೆ 55,05,555 ರೂ. ದೇಣಿಗೆ ನೀಡಲಾಗಿದೆ.
ಸದ್ಯ ಕೃಷ್ಣ ಮಠದಲ್ಲಿ ಪರ್ಯಾಯ ನಡೆಸುತ್ತಿರುವ ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥರಿಂದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಚೆಕ್ ಹಸ್ತಾಂತರ ಮಾಡಲಾಯಿತು. ಈ ವೇಳೆ ಪರ್ಯಾಯ ಮಠದ ಈಶಪ್ರಿಯ ತೀರ್ಥರು, ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್. ಪಿ. ವಿಷ್ಣುವರ್ಧನ್ ಉಪಸ್ಥಿತರಿದ್ದರು.
ಈಗಾಗಲೇ ಅದಮಾರು ಮಠ ಬಡವರಿಗೆ ಆಹಾರದ ಕಿಟ್ ನೀಡಿದೆ.