ETV Bharat / state

ಜಿಎಸ್ಎಂ ನೆಟ್​​​​ವರ್ಕ್​​ ಬಳಸಿ ವ್ಯವಹಾರಕ್ಕೆ ಮುಂದಾದ ಆರ್​​ಬಿಐ: ಉಡುಪಿಯ 5 ಗ್ರಾಮಗಳಲ್ಲಿ ಪ್ರಯೋಗಿಸಲು ಚಿಂತನೆ - ಆರ್​​ಬಿಐ

ಕೇವಲ ಫೋನ್ ಕಾಲ್ ಮಾಡಲು ಮಾತ್ರ ಉಪಯೋಗವಾಗುವ ಜಿಎಸ್ಎಂ ( ಸಂಚಾರಿ-ದೂರವಾಣಿ ಸಂಪರ್ಕ) ನೆಟ್ವರ್ಕ್ ಬಳಸಿ ಬ್ಯಾಂಕಿಂಗ್ ನಡೆಸಲು ಆರ್​​ಬಿಐ ಮುಂದಾಗಿದೆ. ಇದರಿಂದಾಗಿ ಇಂಟರ್ನೆಟ್ ಇಲ್ಲದ ಹಳ್ಳಿಗಳಲ್ಲೂ ಜನ ಮೊಬೈಲ್ ಕರೆಯ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದು. ಈ ಯೋಜನೆಯನ್ನು ಜಾರಿ ಮಾಡುವ ಮೊದಲು ಪ್ರಾಯೋಗಿಕವಾಗಿ ಉಡುಪಿಯ ಐದು ಗ್ರಾಮಗಳಲ್ಲಿ ಪ್ರಯೋಗಿಸಲು ಆರ್​ಬಿಐ ಮುಂದಾಗಿದೆ.

Udupi
ಜಿಎಸ್ಎಂ ನೆಟ್ವರ್ಕ್ ಬಳಸಿ ಬ್ಯಾಂಕಿಂಗ್ ವ್ಯವಹಾರ ನಡೆಸಲು ಮುಂದಾದ ಆರ್​​ಬಿಐ
author img

By

Published : Dec 24, 2020, 6:38 PM IST

ಉಡುಪಿ: ಇಡೀ ದೇಶದ ಅರ್ಥವ್ಯವಸ್ಥೆ ಡಿಜಿಟಲೀಕರಣದ ಕಡೆಗೆ ಸಾಗುತ್ತಿದೆ. ಹಾಗಾದ್ರೆ ನೆಟ್ವರ್ಕ್ ಇಲ್ಲದ ಹಳ್ಳಿಯ ಜನ ಏನು ಮಾಡಬೇಕು? ಆರ್​ಬಿಐ ಇದಕ್ಕಾಗಿ ಒಂದು ವಿಶೇಷ ಯೋಜನೆ ಜಾರಿ ಮಾಡಿದೆ. ಅದು ಉಡುಪಿ ಮೊದಲ ಪ್ರಯೋಗದಲ್ಲಿ ತೊಡಗಿದೆ.

ಜಿಎಸ್ಎಂ ನೆಟ್ವರ್ಕ್ ಬಳಸಿ ಬ್ಯಾಂಕಿಂಗ್ ವ್ಯವಹಾರ ನಡೆಸಲು ಮುಂದಾದ ಆರ್​​ಬಿಐ..

ಹೌದು, ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ನೋಟ್ ಬ್ಯಾನ್ ಮಾಡಿದ ಬಳಿಕ ಪಾರದರ್ಶಕ ಅರ್ಥವ್ಯವಸ್ಥೆಗೆ ಜಾರಿ ಮಾಡಿದ ಯೋಜನೆ ಡಿಜಿಟಲ್ ಅರ್ಥವ್ಯವಸ್ಥೆ. ಕ್ಯಾಶ್​​​​ಲೆಸ್​ ವ್ಯವಹಾರವನ್ನು ಉತ್ತೇಜಿಸಲು ಪ್ರಧಾನ ಮಂತ್ರಿಗಳು ಕರೆ ಕೊಟ್ಟ ಬಳಿಕ ಅನೇಕ ಬದಲಾವಣೆಗಳು ನಡೆದಿವೆ. ಆದರೆ, ನೆಟ್ವರ್ಕ್ ಇಲ್ಲದ ಹಳ್ಳಿಗಳ ಜನ ಏನು ಮಾಡೋದು ಎಂಬ ಚಿಂತೆ ಎಲ್ಲರನ್ನು ಕಾಡಿತ್ತು. ಇದಕ್ಕೆ ಆರ್​ಬಿಐ ಒಂದು ಅತ್ಯುತ್ತಮ ಉಪಾಯ ಕಂಡುಕೊಂಡಿದೆ.

ಕೇವಲ ಫೋನ್ ಕಾಲ್ ಮಾಡಲು ಮಾತ್ರ ಉಪಯೋಗವಾಗುವ ಜಿಎಸ್ಎಂ ನೆಟ್ವರ್ಕ್ ಬಳಸಿ ಬ್ಯಾಂಕಿಂಗ್ ನಡೆಸಲು ಆರ್​​ಬಿಐ ಮುಂದಾಗಿದೆ. ಇದರಿಂದಾಗಿ ಇಂಟರ್ನೆಟ್ ಇಲ್ಲದ ಹಳ್ಳಿಗಳಲ್ಲೂ ಜನ ಮೊಬೈಲ್ ಕರೆಯ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದು. ಈ ಯೋಜನೆಯನ್ನು ಜಾರಿ ಮಾಡುವ ಮೊದಲು ಪ್ರಾಯೋಗಿಕವಾಗಿ ಇದನ್ನು ಉಡುಪಿಯ ಐದು ಗ್ರಾಮಗಳಲ್ಲಿ ಪ್ರಯೋಗಿಸಲು ಆರ್​ಬಿಐ ಮುಂದಾಗಿದೆ.

ಈ ಯೋಜನೆಯಲ್ಲಿ ಜನರು ಸ್ಮಾಟ್​ ಫೋನ್ ಇಲ್ಲದೇ ಸಾಮಾನ್ಯ ಮೊಬೈಲ್ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದು. ವ್ಯಾಲೆಟ್ ಕಾರ್ಡ್ ಮೂಲಕ ದೈನಂದಿನ ವ್ಯವಹಾರಗಳಿಗೆ ಪಾವತಿ ಮಾಡುವುದು ಹೇಗೆ ಅನ್ನೋದನ್ನು ಜನರಿಗೆ ಹೇಳಿಕೊಡುವ ವಿನೂತನ ಯೋಜನೆ ಇದು. ಉಡುಪಿಯ ಕುಕ್ಕೆಹಳ್ಳಿ, ಕಾಡೂರ್, ಚೇರ್ಕಾಡಿ, ಇನ್ನಂಜೆ ಮತ್ತು ಹಾವಂಜೆ ಗ್ರಾಮಗಳ ಒಟ್ಟು ಎರಡೂವರೆ ಸಾವಿರ ಜನರಿಗೆ ಈ ಕಾರ್ಡನ್ನು ಪ್ರಾಯೋಗಿಕವಾಗಿ ವಿತರಿಸಲಾಗುತ್ತಿದೆ. ಡಿಸೆಂಬರ್ ಅಂತ್ಯದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ವ್ಯಕ್ತಿಯೊಬ್ಬ ತನ್ನ ಖಾತೆಯಿಂದ ಹಣವನ್ನು ಈ ವ್ಯಾಲೆಟ್ ಕಾರ್ಡಿಗೆ ವರ್ಗಾಯಿಸಿ ಕೊಳ್ಳಬಹುದು. ಬಳಿಕ ಯಾವುದೇ ಒಟಿಪಿ ಮತ್ತು ಪಾಸ್ವರ್ಡ್ ಬಳಸದೇ ಇದರ ಮೂಲಕ ವ್ಯವಹಾರ ಮಾಡಬಹುದು. ಈ ಕ್ಯಾಶ್ಲೆಸ್ ವ್ಯವಹಾರಕ್ಕೆ ಸ್ಮಾರ್ಟ್​ಫೋನ್ ಅಗತ್ಯವಿಲ್ಲ. ಆದರೆ, ಹಳ್ಳಿಯ ಅನಕ್ಷರಸ್ಥ ಜನಸಾಮಾನ್ಯರು ಯೋಜನೆಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಇನ್ನು ಇದರಲ್ಲಿ ಜನರ ಹಣ ಎಷ್ಟು ಸುರಕ್ಷಿತವಾಗಿರಲಿದೆ ಎಂಬ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳಿವೆ.

ಆರ್​ಬಿಐನ ಪ್ಯಾನ್ ಇಂಡಿಯಾ ಯೋಜನೆಯ ಭಾಗವಾಗಿರುವ ಈ ಅಭಿಯಾನಕ್ಕೆ ಇಡೀ ದೇಶದಲ್ಲಿ ಕೇವಲ ಐದು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಅದು ಕೂಡ ಉಡುಪಿಯ ಐದು ಗ್ರಾಮಗಳು. ಇಲ್ಲಿ ಯೋಜನೆ ಯಶಸ್ವಿಯಾದರೆ ದೇಶದ ಪ್ರತಿಯೊಂದು ಹಳ್ಳಿಗಳಿಗೂ ಯೋಜನೆಯನ್ನು ವಿಸ್ತರಿಸುವ ಗುರಿಯನ್ನು ಆರ್​ಬಿಐ ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.