ಉಡುಪಿ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಗಂಡನನ್ನು ಕೊಲೆ ಮಾಡಿರುವ ಆರೋಪವನ್ನು ಹೊತ್ತಿರುವ ರಾಜೇಶ್ವರಿ ಶೆಟ್ಟಿ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.
![case register on murder accused Rajeshwari Shetty, case register on murder accused Rajeshwari Shetty in Udupi, Prostitution racket, Prostitution racket news, ರಾಜೇಶ್ವರೀ ಶೆಟ್ಟಿ ಮೇಲೆ ಪ್ರಕರಣ ದಾಖಲು, ಕೊಲೆ ಆರೋಪಿ ರಾಜೇಶ್ವರೀ ಶೆಟ್ಟಿ ಮೇಲೆ ಪ್ರಕರಣ ದಾಖಲು, ಉಡುಪಿಯಲ್ಲಿ ಕೊಲೆ ಆರೋಪಿ ರಾಜೇಶ್ವರೀ ಶೆಟ್ಟಿ ಮೇಲೆ ಪ್ರಕರಣ ದಾಖಲು, ವೇಶ್ಯಾವಾಟಿಕೆ ದಂಧೆ, ವೇಶ್ಯಾವಾಟಿಕೆ ದಂಧೆ ಸುದ್ದಿ,](https://etvbharatimages.akamaized.net/etvbharat/prod-images/kn-udp-02-18-lodge-raid-murder-accuse-7202200-jpg_18032021123232_1803f_1616050952_101.jpg)
ಹೋಮಕುಂಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಉದ್ಯಮಿ ಭಾಸ್ಕರ್ ಶೆಟ್ಟಿಯವರ ಪತ್ನಿ. ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯನ್ನು ಕೊಂದು ಹೋಮಕುಂಡದಲ್ಲಿ ಸುಟ್ಟು ಹಾಕಿರುವ ಆರೋಪ ರಾಜೇಶ್ವರಿ ಶೆಟ್ಟಿ ಮೇಲಿದೆ.
![case register on murder accused Rajeshwari Shetty, case register on murder accused Rajeshwari Shetty in Udupi, Prostitution racket, Prostitution racket news, ರಾಜೇಶ್ವರೀ ಶೆಟ್ಟಿ ಮೇಲೆ ಪ್ರಕರಣ ದಾಖಲು, ಕೊಲೆ ಆರೋಪಿ ರಾಜೇಶ್ವರೀ ಶೆಟ್ಟಿ ಮೇಲೆ ಪ್ರಕರಣ ದಾಖಲು, ಉಡುಪಿಯಲ್ಲಿ ಕೊಲೆ ಆರೋಪಿ ರಾಜೇಶ್ವರೀ ಶೆಟ್ಟಿ ಮೇಲೆ ಪ್ರಕರಣ ದಾಖಲು, ವೇಶ್ಯಾವಾಟಿಕೆ ದಂಧೆ, ವೇಶ್ಯಾವಾಟಿಕೆ ದಂಧೆ ಸುದ್ದಿ,](https://etvbharatimages.akamaized.net/etvbharat/prod-images/kn-udp-02-18-lodge-raid-murder-accuse-7202200-jpg_18032021123232_1803f_1616050952_112.jpg)
ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ರಾಜೇಶ್ವರಿ ಶೆಟ್ಟಿ ತನ್ನ ಮಾಲೀಕತ್ವದ ಖಾಸಗಿ ಹೋಟೆಲ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ.
![case register on murder accused Rajeshwari Shetty, case register on murder accused Rajeshwari Shetty in Udupi, Prostitution racket, Prostitution racket news, ರಾಜೇಶ್ವರೀ ಶೆಟ್ಟಿ ಮೇಲೆ ಪ್ರಕರಣ ದಾಖಲು, ಕೊಲೆ ಆರೋಪಿ ರಾಜೇಶ್ವರೀ ಶೆಟ್ಟಿ ಮೇಲೆ ಪ್ರಕರಣ ದಾಖಲು, ಉಡುಪಿಯಲ್ಲಿ ಕೊಲೆ ಆರೋಪಿ ರಾಜೇಶ್ವರೀ ಶೆಟ್ಟಿ ಮೇಲೆ ಪ್ರಕರಣ ದಾಖಲು, ವೇಶ್ಯಾವಾಟಿಕೆ ದಂಧೆ, ವೇಶ್ಯಾವಾಟಿಕೆ ದಂಧೆ ಸುದ್ದಿ,](https://etvbharatimages.akamaized.net/etvbharat/prod-images/kn-udp-02-18-lodge-raid-murder-accuse-7202200-jpg_18032021123232_1803f_1616050952_152.jpg)
ಈಗಾಗಲೇ ವೇಶ್ಯಾವಾಟಿಕೆ ಪ್ರಕರಣದಲ್ಲಿ ಮೂವರ ಬಂಧನವಾಗಿದೆ. ಆರೋಪಿಗಳಾದ ಶೇಖರ ಶೆಟ್ಟಿ, ಜಾನ್ಸನ್ ಡಿ ಅಲ್ಮೇಡಾ, ಹರ್ಷಿತ್ ಶೆಟ್ಟಿ ಪೊಲೀಸರ ಅತಿಥಿಯಾಗಿದ್ದು, ಆರೋಪಿ ರಾಜೇಶ್ವರಿ ಶೆಟ್ಟಿಯ ಬಂಧನಕ್ಕೆ ಪೊಲೀಸರು ತಯಾರಿ ನಡೆಸಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.