ಉಡುಪಿ: ಪುರಾಣಗಳ ಪ್ರಕಾರ ಕಳೆದ ರಾತ್ರಿ ಶ್ರೀ ಕೃಷ್ಣನ ಜನನ ದಿನವಾಗಿದೆ. ಉಡುಪಿಯಾದ್ಯಂತ ಶ್ರೀಕೃಷ್ಣ ಲೀಲೋತ್ಸವ ಸಂಭ್ರಮ ನಡೆಯುತ್ತಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಉತ್ಸವಕ್ಕೆ ಚಾಲನೆ ಸಿಗಲಿದೆ. ಉಡುಪಿ ಪೇಜಾವರ ಮಠದ ಶಾಖಾಮಠ ನೀಲಾವರದಲ್ಲಿ ಶ್ರೀಕೃಷ್ಣ ಲೀಲೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ.
ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಗೋಪಾಲಕೃಷ್ಣ ದೇವರಿಗೆ ತುಳಸಿ ಅರ್ಚನೆಯನ್ನು ನೆರವೇರಿಸಿದ್ದಾರೆ. ಮಹಾಪೂಜೆಯನ್ನು ನಡೆಸಿದ್ದು, ಸದ್ಯ ಗೋವು ಶಾಲೆಯ ಆವರಣದಲ್ಲಿ ಗೋಪಾಲಕೃಷ್ಣನ ಜನ್ಮ ಸಂಭ್ರಮ ಕಳೆಗಟ್ಟಲಿದೆ.
ಕೃಷ್ಣ ಮೊಸರು, ಹಾಲು, ಬೆಣ್ಣೆ ಪ್ರಿಯನಾಗಿದ್ದು, ಮೊಸರು ಕುಡಿಕೆ ಜನ್ಮಾಷ್ಟಮಿಯ ಸಂದರ್ಭ ನಡೆಯುತ್ತದೆ. ನೀಲಾವರದ ಶ್ರೀಕೃಷ್ಣ ಲೀಲೋತ್ಸವ ಸಂದರ್ಭ ಮೊಸರು ಕುಡಿಕೆಗೆ ಬಣ್ಣಬಣ್ಣದ ಮಡಿಕೆಗಳನ್ನು ಸ್ವತಃ ಸ್ವಾಮೀಜಿಯವರೇ ತಯಾರು ಮಾಡಿದ್ದಾರೆ.
ಮಡಕೆಯ ಮೇಲೆ ವಿವಿಧ ಚಿತ್ತಾರಗಳನ್ನು ಮೂಡಿಸಲಾಗಿದ್ದು, ಗೋಶಾಲೆಯ ಸುತ್ತಮುತ್ತ ಮಡಕೆಗಳನ್ನು ಕಟ್ಟಿ ಗೊಲ್ಲರು, ಮಠದ ಭಕ್ತರು ಸೇರಿ ಮೊಸರು ಬಣ್ಣದ ನೀರು ಕಜ್ಜಾಯಗಳು ತುಂಬಿದ ಕುಡಿಕೆಗಳನ್ನು ಇಂದು ಒಡೆದು ಸಂಭ್ರಮಿಸಲಿದ್ದಾರೆ.