ಉಡುಪಿ: ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಪಡಿಸುವ ಕೇಂದ್ರದ ನಿರ್ಧಾರಕ್ಕೆ ಪೇಜಾವರ ಶ್ರೀ ವಿಶ್ವೇಶ ತೀರ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರದ ಎಲ್ಲಾ ರಾಜ್ಯಗಳು ಏಕರೂಪವಾಗಿರುವುದು ಒಳ್ಳೆಯದು. ಕೆಲವು ರಾಷ್ಟ್ರಗಳಿಗೆ ಹೆಚ್ಚಿನ ಸ್ಥಾನಮಾನ ನೀಡುವುದು, ಕೆಲವುದಕ್ಕೆ ಕಡಿಮೆ ಸ್ವಾತಂತ್ರ್ಯ ನೀಡುವುದು ಒಳ್ಳೆಯದಲ್ಲ. ರಾಷ್ಟ್ರ ವಿಚ್ಛಿನ್ನವಾಗುವ ಭಯ ದೂರವಾಗಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸ್ವಾಗತರ್ಹ. ಆದರೆ, ಇದರಿಂದ ಕಾಶ್ಮೀರದಲ್ಲಿ ಹಿಂಸಾಚಾರ, ಹತ್ಯಾಕಾಂಡ ಆಗದಂತೆ ಎಚ್ಚರವಹಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಕಾಶ್ಮೀರದಲ್ಲಿನ ಹಿಂದೂ, ಮುಸ್ಲಿಂ ಎಲ್ಲರಿಗೂ ಸಮಾಧಾನ ಆಗುವ ರೀತಿಯಲ್ಲಿ ಕೇಂದ್ರ ಪ್ರಯತ್ನಿಸಬೇಕು. ಹಿಂಸಾಚಾರ ಆಗದಂತೆ ಸಮರ್ಥವಾಗಿ ನಿಭಾಯಿಸುವ ಜಾಣ್ಮೆ ಪ್ರಧಾನಿ ಮೋದಿಗೆ ಇದೆ. ಪ್ರಧಾನಿ ಹಾಗೂ ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸಿಸುತ್ತೇನೆ. ಕಾಶ್ಮೀರದಲ್ಲಿ ಶಾಂತಿ ಕಾಪಾಡುವಂತೆ ವಿಶೇಷವಾಗಿ ಮನವಿ ಮಾಡುತ್ತೇನೆ ಎಂದರು.