ಉಡುಪಿ: ರೈಲಿನಿಂದ ಇಳಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ಸಿಬ್ಬಂದಿ ರಕ್ಷಿಸಿದ ಘಟನೆ ಉಡುಪಿ ರೈಲು ನಿಲ್ದಾಣದಲ್ಲಿ ನಡೆದಿದೆ. ಪೆರ್ಡೂರಿನ 70 ವರ್ಷದ ಕುತಿ ಕುಂದನ್ ಅವರು ಪ್ಲಾಟ್ ಫಾರಂ ನಂಬರ್ 1 ರಲ್ಲಿ ತಮ್ಮ ಮಗಳನ್ನು ಟ್ರೈನ್ ಹತ್ತಿಸುವ ಸಲುವಾಗಿ ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಕುತಿ ಕುಂದನ್ ಅವರು ಮಗಳನ್ನು ರೈಲಿನಲ್ಲಿ ಕುಳ್ಳಿರಿಸಿ ವಾಪಸ್ ಮರಳುವ ವೇಳೆ ಆಯತಪ್ಪಿ ಬಿದ್ದರು. ಆಗ ಬಾಗಿಲಿನ ಹ್ಯಾಂಡಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ರೈಲಿನೊಂದಿಗೆ ಎಳೆದೊಯ್ಯಲ್ಪಡುತ್ತಿದ್ದರು.
ಇದನ್ನು ಗಮನಿಸಿದ ರೈಲ್ವೆ ಪೊಲೀಸ್ ಸಿಬ್ಬಂದಿ ಸಜೀರ್ ತಕ್ಷಣವೇ ಬಂದು ಅವರನ್ನು ಅಲ್ಲಿಂದ ಪಾರು ಮಾಡಿ ಪ್ರಥಮ ಚಿಕಿತ್ಸೆ ನೀಡಿ ಕುಟುಂಬಸ್ಥರೊಂದಿಗೆ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟ್ಟಿ ಕುಂದನ್ ಅವರನ್ನು ರಕ್ಷಿಸಿದ್ದಕ್ಕಾಗಿ ಸಜೀರ್ ಅವರನ್ನು ಕುಟುಂಬಸ್ಥರು ಅಭಿನಂದಿಸಿದ್ದಾರೆ.
ಓದಿ: ಆ ಒಂದೇ ಒಂದು ಸೆಲ್ಫಿ... ಐದು ವರ್ಷದಿಂದ ತಲೆ ಮರೆಸಿಕೊಂಡಿದ್ದವ ಸಿಕ್ಕಿ ಬೀಳುವಂತೆ ಮಾಡ್ತು!