ಉಡುಪಿ: ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉಡುಪಿ- ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಬೈಕ್ನಲ್ಲಿದ್ದ ಸಹ ಸವಾರ ಶರಣರಾಜ ಕೊಡಿಕನ್ಯಾಣ ಗಂಭೀರ ಗಾಯಗೊಂಡಿದ್ದಾನೆ. ಮೃತಪಟ್ಟವರನ್ನು ಕಾವಡಿಯ ವಿವೇಕ್ (35) ಎಂದು ಗುರುತಿಸಲಾಗಿದೆ.
ಕುಂದಾಪುರ ಪೈ ಇಂಟರ್ನ್ಯಾಷನಲ್ ಮಳಿಗೆಯ ವ್ಯವಸ್ಥಾಪಕರಾಗಿದ್ದ ಅವರು, ರಾತ್ರಿ ವೇಳೆ ಮರಳಿ ಬರುವಾಗ ಈ ಘಟನೆ ನಡೆದಿದೆ. ಗಾಯಗೊಂಡ ತೀವ್ರತೆಗೆ ಮೃತ ದೇಹ ಛಿದ್ರವಾಗಿದೆ. ಈ ಕುರಿತು ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.