ಉಡುಪಿ: ಇಂದಿನಿಂದ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು ಬಹುತೇಕ ಎಲ್ಲಾ ದೇವಸ್ಥಾನಗಳು ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿವೆ. ಕೆಲವೆಡೆ ಮಾತ್ರ ಜೂನ್ 30 ವರೆಗೂ ತೆರೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿವೆ.
ಉಡುಪಿಯ ಕೊಲ್ಲೂರಿನಲ್ಲಿ ಕೂಡಾ ಇಂದು ಭಕ್ತರಿಗೆ ಮೂಕಾಂಬಿಕೆಯ ದರ್ಶನ ಕಲ್ಪಿಸಲಾಗಿದೆ. ಭಕ್ತರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. 77 ದಿನಗಳ ನಂತರ ಭಕ್ತರಿಗೆ ದೇಗುಲ ತೆರೆದಿದೆ. ದೇವಸ್ಥಾನಗಳನ್ನು ಹೂವಿನಿಂದ ಸಿಂಗಾರ ಮಾಡಲಾಗಿದೆ. ಥರ್ಮಲ್ ಚೆಕಪ್ ಮಾಡಿ ಸ್ಯಾನಿಟೈಸರ್ ನೀಡಿ ಭಕ್ತರನ್ನು ಒಳಗೆ ಬಿಡಲಾಗುತ್ತಿದೆ. ದೇವಸ್ಥಾನದ ಧ್ವಜಸ್ತಂಭವರೆಗೆ ಮಾತ್ರ ಭಕ್ತರಿಗೆ ಹೋಗುವ ಅವಕಾಶ ಕಲ್ಪಿಸಲಾಗಿದೆ. ಯಾರಿಗೆ ಕೂಡಾ ಮೂಕಾಂಬಿಕೆಯ ಗರ್ಭಗುಡಿ ಹತ್ತಿರ ಪ್ರವೇಶ ಇಲ್ಲ. ದೂರದಿಂದಲೇ ಭಕ್ತರು ದೇವಿಯನ್ನು ನೋಡಿ ಕೈ ಮುಗಿಯುತ್ತಿದ್ದಾರೆ.