ಉಡುಪಿ: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಅಧ್ಯಾಯ ಫಸ್ಟ್ ಲುಕ್ ರಿಲಿಸ್ ಆಗಿದೆ. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರುತ್ತಿದ್ದು ಸಿನಿ ಪ್ರಿಯರು ಮತ್ತು ನೆಟಿಜನ್ಸ್ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಫಸ್ಟ್ ಲುಕ್ನಲ್ಲಿ ಅಘೋರಿ ಅವತಾರದಲ್ಲಿ ರಿಷಬ್ ಅಚ್ಚರಿ ಕಾಣಿಸಿಕೊಂಡಿದ್ದು, ಬೇರೊಂದು ಲೋಕಕ್ಕೆ ಕರೆದೊಯ್ಯುವಂತಿದೆ. ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿ ಹಿಡಿದುಕೊಂಡಿರುವ ಪೋಸ್ಟರ್ ಇದಾಗಿದ್ದು, ಶಿವನ ಅವತಾರದ ಮತ್ತೊಂದು ರೂಪ ಎಂದು ನೆಟಿಜನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಉಡುಪಿಯ ಕುಂದಾಪುರ ತಾಲೂಕಿನ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರದ ಮೊದಲ ಅಧ್ಯಾಯಕ್ಕೆ ಇಂದು ಮುಹೂರ್ತ ನಡೆಯಿತು. ಅದಕ್ಕೂ ಮುನ್ನ ಚಿತ್ರತಂಡವು ವಿಶೇಷ ಪೂಜೆ ಸಲ್ಲಿಸಿತಲ್ಲದೇ ಉದ್ಭವಮೂರ್ತಿ ವಿನಾಯಕ ದೇವರಿಗೆ ಮೂಡು ಗಣಪತಿ ಸೇವೆ, ತ್ರಿಕಾಲ ಸೇವೆ, ಅನ್ನದಾನ ನಡೆಸಿತು. ಈ ವಿಶೇಷ ದಿನದ ನಿಮಿತ್ತ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
-
𝐈𝐓'𝐒 𝐍𝐎𝐓 𝐉𝐔𝐒𝐓 𝐋𝐈𝐆𝐇𝐓, 𝐈𝐓'𝐒 𝐀 𝐃𝐀𝐑𝐒𝐇𝐀𝐍𝐀 🔥#Kantara1Teaser - https://t.co/dtq78BOGVv#Kantara1FirstLook #KantaraChapter1 #Kantara pic.twitter.com/zoTpUgwWjF
— Kantara - A Legend (@KantaraFilm) November 27, 2023 " class="align-text-top noRightClick twitterSection" data="
">𝐈𝐓'𝐒 𝐍𝐎𝐓 𝐉𝐔𝐒𝐓 𝐋𝐈𝐆𝐇𝐓, 𝐈𝐓'𝐒 𝐀 𝐃𝐀𝐑𝐒𝐇𝐀𝐍𝐀 🔥#Kantara1Teaser - https://t.co/dtq78BOGVv#Kantara1FirstLook #KantaraChapter1 #Kantara pic.twitter.com/zoTpUgwWjF
— Kantara - A Legend (@KantaraFilm) November 27, 2023𝐈𝐓'𝐒 𝐍𝐎𝐓 𝐉𝐔𝐒𝐓 𝐋𝐈𝐆𝐇𝐓, 𝐈𝐓'𝐒 𝐀 𝐃𝐀𝐑𝐒𝐇𝐀𝐍𝐀 🔥#Kantara1Teaser - https://t.co/dtq78BOGVv#Kantara1FirstLook #KantaraChapter1 #Kantara pic.twitter.com/zoTpUgwWjF
— Kantara - A Legend (@KantaraFilm) November 27, 2023
ಕಾಂತಾರ ಚಾಪ್ಟರ್ 1 ಶುರು ಮಾಡಿದ್ದೇವೆ. ಅಧ್ಯಾಯ ಎರಡನ್ನು ನೋಡಿ ನೀವು ದೊಡ್ಡ ಹಿಟ್ ಮಾಡಿದ್ದೀರಿ. ಇದರ ಸಂಪೂರ್ಣ ಸಕ್ಸಸ್ ಅನ್ನು ಕನ್ನಡಿಗರಿಗೆ ಅರ್ಪಿಸಲು ಇಷ್ಟಪಡುವೆ. ಇದರ ಮುಂದುವರಿದ ಪಯಣದಲ್ಲಿ ಮುನ್ನುಡಿ ಅಂದರೆ ಹಿಂದೆ ಏನು ನಡೆಯಿತು ಎನ್ನುವುದನ್ನು ಹೇಳಲು ಹೊರಟಿದ್ದೇನೆ. ಹಿಂದಿನಂತೆ ಈ ಸಿನಿಮಾಕ್ಕೂ ನಿಮ್ಮೆಲ್ಲರ ಹಾರೈಕೆ ಇರಲಿ. ಯಶಸ್ಸನ್ನು ಜವಾಬ್ದಾರಿಯಾಗಿ ತೆಗೆದುಕೊಂಡು ಅದ್ಭುತವಾಗಿ ಕೆಲಸ ಮಾಡಿಕೊಂಡು ಹೋಗುವತ್ತ ಇಡೀ ತಂಡ ಪ್ರಯತ್ನ ಮಾಡುತ್ತಿದೆ ಎಂದು ಮುಹೂರ್ತಕ್ಕೂ ಮುನ್ನ ನಟ ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಬಗ್ಗೆ ಖುಷಿ ಹಂಚಿಕೊಂಡರು.
ಕಳೆದ ವರ್ಷ ತೆರೆ ಕಂಡ ಕಾಂತಾರ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿತ್ತು. ಎಲ್ಲರ ನಿರೀಕ್ಷೆಯನ್ನು ಮೀರಿ ಯಶಸ್ವಿ ಪ್ರದರ್ಶನ ಕಂಡಿತ್ತು. ಇದಾದ ಒಂದು ವರ್ಷದ ಬಳಿಕ ಚಿತ್ರದ ಮತ್ತೊಂದು ಭಾಗಕ್ಕೆ ಇಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಹೂರ್ತ ನೆರವೇರಿಸಿತು. ಮಹೂರ್ತ ಸಂದರ್ಭದಲ್ಲಿ ನಟ ರಿಷಬ್ ಶೆಟ್ಟಿ ಪತ್ನಿ, ಇಬ್ಬರು ಮಕ್ಕಳು, ನಿರ್ಮಾಪಕ ವಿಜಯ್ ಕಿರಗಂದೂರು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಹಲವರು ಹಾಜರಿದ್ದರು. ಕಾಂತಾರ ಭಾಗ 2ರ ಕಥೆಯು 14ನೇ ಶತಮಾನದಿಂದ ಶುರುವಾಗಲಿದೆ ಎನ್ನಲಾಗುತ್ತಿದ್ದು ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆಯಂತೆ.
-
Step into the land of the divine 🔥
— Hombale Films (@hombalefilms) November 27, 2023 " class="align-text-top noRightClick twitterSection" data="
Presenting #KantaraChapter1 First Look & #Kantara1Teaser in 7 languages❤️🔥
▶️ https://t.co/GFZnkCg4BZ#Kantara1FirstLook #Kantara @shetty_rishab @VKiragandur @hombalefilms @HombaleGroup @AJANEESHB @Banglan16034849 @KantaraFilm pic.twitter.com/2GmVyrdLFK
">Step into the land of the divine 🔥
— Hombale Films (@hombalefilms) November 27, 2023
Presenting #KantaraChapter1 First Look & #Kantara1Teaser in 7 languages❤️🔥
▶️ https://t.co/GFZnkCg4BZ#Kantara1FirstLook #Kantara @shetty_rishab @VKiragandur @hombalefilms @HombaleGroup @AJANEESHB @Banglan16034849 @KantaraFilm pic.twitter.com/2GmVyrdLFKStep into the land of the divine 🔥
— Hombale Films (@hombalefilms) November 27, 2023
Presenting #KantaraChapter1 First Look & #Kantara1Teaser in 7 languages❤️🔥
▶️ https://t.co/GFZnkCg4BZ#Kantara1FirstLook #Kantara @shetty_rishab @VKiragandur @hombalefilms @HombaleGroup @AJANEESHB @Banglan16034849 @KantaraFilm pic.twitter.com/2GmVyrdLFK
ಈ ಹಿಂದೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಶೇರ್ ಮಾಡಿದ್ದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ''ಇದು ಬರಿ ಬೆಳಕಲ್ಲ, ದರ್ಶನ'' ಕಾಂತಾರ ಪ್ರೀಕ್ವೆಲ್ ಫಸ್ಟ್ ಲುಕ್ ನವೆಂಬರ್ 27ರ ಮಧ್ಯಾಹ್ನ 12:25ಕ್ಕೆ ಬಿಡುಗಡೆ ಎಂದು ಬರೆದುಕೊಂಡಿದ್ದರು. ಅಂದುಕೊಂಡಂತೆ ಇಂದು ಬಿಡುಗಡೆಯಾಗಿದ್ದು ಕಾಂತಾರ ಪಾರ್ಟ್ 2 ಯಾವಾಗ ಎಂದು ಕಾದು ಕುಳಿತ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ.
ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಪ್ರೀಕ್ವೆಲ್ ಟೀಸರ್ ರಿಲೀಸ್