ಉಡುಪಿ: ಶಿವ ತಾಂಡವ ಸ್ತೋತ್ರದ ಮೂಲಕ ವಿಶ್ವವಿಖ್ಯಾತಿ ಗಳಿಸಿರುವ ಕಾಳಿ ಚರಣ್ ಮಹಾರಾಜ್ ಇಂದು ಉಡುಪಿಯ ಅನಂತೇಶ್ವರ ಸ್ವಾಮಿಯ ದರ್ಶನ ಪಡೆದರು.
ಮಧ್ಯಪ್ರದೇಶದ ರಾಜೇಶ್ವರದಲ್ಲಿ ಇವರು ಹಾಡಿದ ಶಿವ ತಾಂಡವ ಸ್ತೋತ್ರ ಕೋಟ್ಯಂತರ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅತ್ಯಂತ ತಲ್ಲೀನತೆಯಿಂದ ಶಿವತಾಂಡವ ಸ್ತೋತ್ರವನ್ನು ಹಾಡುವ ಜೊತೆಗೆ ಕಟ್ಟುಮಸ್ತಾದ ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಹಾವ - ಭಾವದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕಾಳಿ ಚರಣ್ ಮಹಾರಾಜ್ ಅವರು, ಸದ್ಯ ದಕ್ಷಿಣ ಭಾರತದ ತೀರ್ಥಯಾತ್ರೆಯಲ್ಲಿ ತೊಡಗಿದ್ದಾರೆ.
ಉಡುಪಿಯ ಜನಾರ್ದನ ಮಹಾಕಾಳಿ ದೇವಸ್ಥಾನ ಅನಂತೇಶ್ವರ ಚಂದ್ರಮೌಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇವರು ಭಾವಪರವಶರಾಗಿ ಶಿವ ತಾಂಡವ ಸ್ತೋತ್ರವನ್ನು ಹಾಡಿದರು. ಮಹಾರಾಷ್ಟ್ರ ಮೂಲದವರಾಗಿರುವ ಕಾಳಿ ಚರಣ್ ಮಹಾರಾಜ್ ಅವರು, ಇಂದೋರ್ನಲ್ಲಿ ಆಶ್ರಮ ಹೊಂದಿದ್ದಾರೆ. ಗೋ ರಕ್ಷಣೆ ಮತ್ತು ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಜೀವನ ಮುಡಿಪು ಎಂದು ಸ್ವಾಮೀಜಿ ಅವರು ಘೋಷಿಸಿಕೊಂಡಿದ್ದಾರೆ.