ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಶ್ರೀಗಂಧ ಕದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದ್ದು, ಆತನಿಂದ 3.8 ಕೆ.ಜಿ. ತೂಕದಷ್ಟು ಗಂಧದ ಕೊರಡುಗಳನ್ನು ವಶಪಡಿಸಲಾಗಿದೆ.
ವಂಡ್ಸೆ ಗ್ರಾಮದ ಹಕ್ಲುಮನೆ ನಿವಾಸಿ ರಾಜೇಶ್ (34) ಬಂಧಿತ ಆರೋಪಿ. ರಾಜೇಶ್ ನೋಂದಣಿ ಆಗದ ರಿಕ್ಷಾದಲ್ಲಿ ಶ್ರೀಗಂಧ ಮರದ ಕೊರಡುಗಳನ್ನು ದಾಸ್ತಾನು ಮಾಡಿಟ್ಟಿದ್ದ. ಕುಂದಾಪುರ ಅರಣ್ಯಾಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯಂತೆ ವಂಡ್ಸೆಗೆ ತೆರಳಿ ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಿ ಶ್ರೀಗಂಧದ ಕೊರಡು ಸಮೇತ ಆಟೋವನ್ನು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿಯನ್ನೂ ಓದಿ: ಫಲಿಸದ 20 ಗಂಟೆಗಳ ಕಾರ್ಯಾಚರಣೆ: ಬದುಕಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ
ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.