ETV Bharat / bharat

ಮಹಾ ಎಲೆಕ್ಷನ್ ’ಬ್ಯಾಟಲ್’​ : ಇವಿಎಂಗೆ ಸವಾಲಾಗಿ ಅಣಕು ಬ್ಯಾಲೆಟ್​ ಪೇಪರ್​ ಮತದಾನಕ್ಕೆ ಮುಂದಾದ ಗ್ರಾಮಸ್ಥರು

ಇವಿಎಂ ಮತದಾನದೊಂದಿಗೆ ಬ್ಯಾಲೆಟ್​ ವೋಟಿಂಗ್​ ಹೊಂದಾಣಿಕೆ ಆಗುತ್ತಾ ಎಂಬುದನ್ನು ಪರೀಕ್ಷಿಸಲು ಮುಂದಾದ ಮಾರ್ಕಡವಾಡಿ ಗ್ರಾಮಸ್ಥರ ಯತ್ನಕ್ಕೆ ಪೊಲೀಸರು ಬ್ರೇಕ್​ ಹಾಕಿದ್ದಾರೆ.

Markadwadi villagers challenge EVM voting gone through mock Ballot paper
ಅಣಕು ಚುನಾವಣೆ (ಈಟಿವಿ ಭಾರತ್​)
author img

By ETV Bharat Karnataka Team

Published : 18 hours ago

ಸೋಲಾಪುರ (ಮಹಾರಾಷ್ಟ್ರ): ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಪಕ್ಷಗಳು ನಾನಾ ಅನುಮಾನ ವ್ಯಕ್ತಪಡಿಸಿವೆ. ಈ ಕುರಿತು ರಾಜ್ಯದ ಸೋಲಾಪುರದ ಪಂಢರಪುರ ಜನರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಪಂಢರಪುರದ ಮಾರ್ಕಡವಾಡಿ ಗ್ರಾಮದಲ್ಲಿ ಇವಿಎಂ ದೋಷವಿದೆ ಎಂದಿದ್ದು, ಅಣಕು ಬ್ಯಾಲೆಟ್​ ಪೇಪರ್ ಮತದಾನಕ್ಕೆ ಒತ್ತಾಯಿಸಿದ್ದಲ್ಲದೇ ಇಂದು ಮತದಾನಕ್ಕೂ ಮುಂದಾಗಿದ್ದಾರೆ.

ನಡೆದಿದ್ದೇನು?: ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಮಲ್ಶಿರಾಸ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಶರದ್​ ಪವಾರ್​ ಎನ್‌ಸಿಪಿ ಅಭ್ಯರ್ಥಿ ಉತ್ತಮರಾವ್ ಜಂಕರ್ ಗೆಲುವು ಸಾಧಿಸಿದ್ದಾರೆ. ಆದರೆ, ಅವರ ಗೆಲುವಿನ ಅಂತರ ಕಡಿಮೆ ಆಗಿದೆ. 2009, 2014 ಮತ್ತು 2019 ರ ವಿಧಾನಸಭಾ ಚುನಾವಣೆಗಳು ಮತ್ತು ಲೋಕಸಭೆಯ ಸ್ಪರ್ಧೆಗಳಲ್ಲಿ ಜಂಕರ್​ ಭರ್ಜರಿ ಜಯಗಳಿಸಿದ್ದು, ಇಲ್ಲಿನ ಜನರಿಂದ ಹೆಚ್ಚಿನ ಬೆಂಬಲವನ್ನು ಪಡೆದಿದ್ದರು. ಆದರೆ, ಇದೀಗ ಅವರ ಜಯದ ಮತಗಳ ಅಂತರ ಕಡಿಮೆಯಾಗಿರುವುದು ಇವಿಎಂ ಮೇಲಿನ ಅನುಮಾನವನ್ನು ಜನರಲ್ಲಿ ಹೆಚ್ಚಿಸಿತು. ಈ ಹಿನ್ನಲೆ ಮಲ್ಶಿರಾಸ್​ ತಹಶೀಲ್ದಾರ್​​ಗೆ ಜನರು ಪತ್ರ ಬರೆದು ಬ್ಯಾಲೆಟ್​ ಪೇಪರ್​ ಚುನಾವಣೆಗೆ ಒತ್ತಾಯಿಸಿದ್ದರು.

ತಹಶೀಲ್ದಾರ್​ ಇವಿಎಂ ಮತನದಾನ ನಡೆಸುವುದಾಗಿ ಹೇಳಿದರು. ಆದ್ರೆ ಗ್ರಾಮಸ್ಥರು ಇವಿಎಂ ಬದಲು ಬ್ಯಾಲೆಟ್​ ವೋಟಿಂಗ್ ಮಾಡುವಂತೆ ಪಟ್ಟು ಹಿಡಿದರು. ಇದಕ್ಕೆ ಗ್ರಾಮಸ್ಥರೇ ಸ್ವತಃ ಹಣ ವ್ಯಯಿಸುವುದಾಗಿ ಹೇಳಿದ್ದರು. ಬಳಿಕ ಎರಡೂ ಪ್ರಕ್ರಿಯೆ ನಡೆಸಲು ತಹಶೀಲ್ದಾರ್​ ಅನುವು ಮಾಡಿಕೊಟ್ಟರು. ಚುನಾವಣೆ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಜಂಕರ್ ಗುಂಪು ಸರ್ಕಾರದ ಮೇಲ್ವಿಚಾರಣೆ ಮಾಡುವಂತೆ ವಿನಂತಿಸಿತ್ತು.

ಹೊರಗೆ ಬಂದರೆ ಕೇಸ್​ ದಾಖಲಿಸುತ್ತೇವೆ- ಪೊಲೀಸರ ಎಚ್ಚರಿಕೆ: ಇಂದು (ಡಿಸೆಂಬರ್ 3) ಮರ್ಕಡವಾಡಿ ಗ್ರಾಮದಲ್ಲಿ ಅಭಿರೂಪ್ ಮತಯಂತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯಬೇಕಿತ್ತು. ಇದಕ್ಕಾಗಿ ಗ್ರಾಮಸ್ಥರು ಗ್ರಾಮದಲ್ಲಿ ಐದು ಬೂತ್‌ಗಳನ್ನು ರಚಿಸಿ ಮತಪೆಟ್ಟಿಗೆ, ಅಂಚೆಚೀಟಿ, ಮತಯಂತ್ರ ಸೇರಿದಂತೆ ಎಲ್ಲ ಸಾಮಗ್ರಿಗಳನ್ನು ಮತಗಟ್ಟೆಗೆ ತಂದಿದ್ದರು. ಆದರೆ, ಗ್ರಾಮದಲ್ಲಿ 144 ಸೆಕ್ಷನ್​ ಜಾರಿಯಾಗಿದೆ. ಮತದಾನ ಮಾಡಿದರೆ ಜನರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನ್ಯಾಯಾಲಯದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತೆ: ಇದರ ನಂತರ ಏನೇ ನಡೆದರೂ ಎನ್‌ಸಿಪಿ (ಶರದ್ ಪವಾರ್) ಶಾಸಕ ಉತ್ತಮ್ ಜಂಕರ್ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಎಚ್ಚರಿಕೆ ನೀಡಿದ ನಂತರ ಮತದಾನ ಪ್ರಕ್ರಿಯೆಯನ್ನು ರದ್ದುಗೊಳಿಸಲಾಯಿತು. ಆದರೂ ನಾವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ ಎಂದು ಜಂಕರ್ ಹೇಳಿದ್ದಾರೆ.

ನೂತನ ಶಾಸಕ ಜಂಕರ್​ ಹೇಳುವುದಿಷ್ಟು: ಈ ಬಗ್ಗೆ ಮಾತನಾಡಿರುವ ಎನ್​​​​​ಸಿಪಿ(SP) ಶಾಸಕ ಉತ್ತಮ್​ ಜಂಕರ್​, ಇವಿಎಂನೊಂದಿಗೆ ಬ್ಯಾಲೆಟ್​ ಮತದಾನವನ್ನು ಹೊಂದಾಣಿಕೆ ಮಾಡುವುದಕ್ಕಾಗಿ ಮತದಾನ ನಡೆಯುವುದಿತ್ತು. ಆದರೆ ಪೊಲೀಸರು ಮತದಾನಕ್ಕೆ ಆಗಮಿಸಿದರೆ ಕೇಸ್​​ ದಾಖಲಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಜನರು ಮತದಾನ ಮಾಡಲು ಮನೆಗಳಿಂದ ಹೊರಗೆ ಬರುತ್ತಿಲ್ಲ. ತಾಲೂಕು ಆಡಳಿತ ಮಾರ್ಕಡವಾಡಿ ಗ್ರಾಮಸ್ಥರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ಇರಾದೆ ಹೊಂದಿಲ್ಲ. ಮತದಾನಕ್ಕೆ ಬಂದ 400 ರಿಂದ 500 ಜನ 144 ಸೆಕ್ಷನ್​ ಜಾರಿ ಹಿನ್ನೆಲೆಯಲ್ಲಿ ವಾಪಸ್​ ಆಗಿದ್ದಾರೆ. ಪೊಲೀಸ್​ ಭದ್ರತೆಯಿಂದಾಗಿ ಹಳ್ಳಿಗರು ಒತ್ತಡದಲ್ಲಿದ್ದಾರೆ. ನಾವು ಈ ಬಗ್ಗೆ ತಾಲೂಕು ಆಡಳಿತದೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೃತ ಶಾಸಕರ ಪುತ್ರನ ಸರ್ಕಾರಿ ನೌಕರಿ ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಕೇರಳ ಸರ್ಕಾರಕ್ಕೆ ಹಿನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.