ETV Bharat / bharat

3 ಹೊಸ ಕ್ರಿಮಿನಲ್ ಕಾನೂನುಗಳ ಲೋಕಾರ್ಪಣೆ ಕಾರ್ಯಕ್ರಮ ಇಂದು: ಪ್ರಧಾನಿ ಮೋದಿ ಭಾಗಿ

ಮೂರು ಹೊಸ ಕ್ರಿಮಿನಲ್ ಕಾನೂನಗಳ ಅನುಷ್ಠಾನವನ್ನು ಪ್ರಧಾನಿ ಮೋದಿ ಇಂದು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ETV BHARAT)
author img

By ETV Bharat Karnataka Team

Published : 19 hours ago

ಚಂಡೀಗಢ: ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷರತಾ ಅಧಿನಿಯಮ ಹೆಸರಿನ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಮಧ್ಯಾಹ್ನ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

30 ನಿಮಿಷಗಳ ಲೈವ್ ಪ್ರಾತ್ಯಕ್ಷಿಕೆ: ಹೊಸದಾಗಿ ಜಾರಿಗೆ ತಂದ ಕ್ರಿಮಿನಲ್ ಕಾನೂನುಗಳ ಪ್ರಕಾರ ಅಪರಾಧ ಸ್ಥಳದಲ್ಲಿ ಯಾವ ರೀತಿ ತನಿಖೆ ಮಾಡಬೇಕೆಂಬುದನ್ನು ತೋರಿಸುವ 30 ನಿಮಿಷಗಳ ಲೈವ್ ಪ್ರಾತ್ಯಕ್ಷಿಕೆಯನ್ನು ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್​ಪಿ)ಯವರು ಪ್ರಧಾನಿಯ ಎದುರು ಪ್ರಸ್ತುತಪಡಿಸಲಿದ್ದಾರೆ. "ಸುರಕ್ಷಿತ ಸಮಾಜ, ಅಭಿವೃದ್ಧಿ ಹೊಂದಿದ ಭಾರತ: ಶಿಕ್ಷೆಯಿಂದ ನ್ಯಾಯದೆಡೆ" ಎಂಬ ವಿಷಯದ ಮೇಲಿನ ಪ್ರಸ್ತುತಿಯಲ್ಲಿ ಮೂರು ಸನ್ನಿವೇಶಗಳನ್ನು ಪ್ರದರ್ಶಿಸಲಾಗುವುದು. ಈ ಸಮಾರಂಭವು ಚಂಡೀಗಢದ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಪಿಇಸಿ) ನಡೆಯಲಿದೆ.

ಮೊದಲ ಸನ್ನಿವೇಶದಲ್ಲಿ "ಕೊಲೆ ಮತ್ತು ದರೋಡೆ ಪ್ರಕರಣದ" ವರದಿಯ ಬಗ್ಗೆ ಇರಲಿದೆ. ಇಂಥ ಪ್ರಕರಣಗಳಲ್ಲಿ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ (ಸಿಎಫ್ಎಸ್ಎಲ್) ತಂಡ ಮತ್ತು ಹತ್ತಿರದ ಜಿಪಿಎಸ್ ಚಾಲಿತ ಪಿಸಿಆರ್ ವ್ಯಾನ್ ಗಳು ತಕ್ಷಣವೇ ಸ್ಥಳಕ್ಕೆ ಹೇಗೆ ತಲುಪುತ್ತವೆ ಎಂಬುದರ ಮಾಹಿತಿ ನೀಡಲಾಗುವುದು.

ಎರಡನೆಯ ಸನ್ನಿವೇಶದಲ್ಲಿ ಅಪರಾಧ ಸ್ಥಳದಲ್ಲಿ ಚಿತ್ರಗಳು, ವೀಡಿಯೊಗಳು ಮತ್ತು ಟೈಮ್ ಸ್ಟಾಂಪ್ ಗಳು ಸೇರಿದಂತೆ ಎಲ್ಲಾ ಪುರಾವೆಗಳನ್ನು ಇ-ಸಾಕ್ಷ್ಯ ಅಪ್ಲಿಕೇಶನ್ ಮೂಲಕ ಡಿಜಿಟಲ್ ಆಗಿ ಹೇಗೆ ಸೆರೆಹಿಡಿಯಲಾಗುತ್ತದೆ ಮತ್ತು ನೇರವಾಗಿ ನ್ಯಾಯಾಲಯಕ್ಕೆ ಹೇಗೆ ಸಲ್ಲಿಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಲಿದೆ. ಈ ಸನ್ನಿವೇಶದಲ್ಲಿ, ವಿಧಿವಿಜ್ಞಾನ ತಂಡವು ಪ್ರಮುಖ ಪುರಾವೆಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಬಲಿಪಶುವಿನ ಮಗಳೊಬ್ಬಳು ತನ್ನ ತಂದೆಯ ದೇಹವನ್ನು ಹೇಗೆ ಗುರುತಿಸುತ್ತಾಳೆ ಎಂಬುದರ ಬಗ್ಗೆ ತಿಳಿಸಲಾಗುವುದು.

ನ್ಯಾಯ ಸೇತು ಆ್ಯಪ್​​ನಲ್ಲಿ ಅಳವಡಿಸಲಾದ ಮುಖ ಗುರುತಿಸುವಿಕೆ ಫೀಚರ್ ಆಗಿರುವ ಚಿತ್ರಖೋಜಿಯನ್ನು ಮೂರನೇ ಹಂತದಲ್ಲಿ ಪ್ರಧಾನಿಯ ಮುಂದೆ ಪ್ರಸ್ತುತಪಡಿಸಲಾಗುವುದು. ಈ ತಂತ್ರವು ಸಿಸಿಟಿವಿ ದೃಶ್ಯಾವಳಿಗಳಿಂದ ಮುಖದ ಫೋಟೋಗಳನ್ನು 10 ದಶಲಕ್ಷಕ್ಕೂ ಹೆಚ್ಚು ಜನರ ರಾಷ್ಟ್ರೀಯ ಡೇಟಾಬೇಸ್​ನೊಂದಿಗೆ ಹೋಲಿಸುವ ಮೂಲಕ ತನಿಖಾಧಿಕಾರಿಗಳಿಗೆ ತಕ್ಷಣದ ಸುಳಿವುಗಳನ್ನು ನೀಡುತ್ತದೆ.

ಭಾರತದ ಕಾನೂನು ವ್ಯವಸ್ಥೆಯ ದಕ್ಷತೆ, ಪಾರದರ್ಶಕತೆ ಮತ್ತು ಆಧುನಿಕ ಸಮಾಜದ ಅಗತ್ಯಗಳಿಗೆ ಹೊಂದಿಕೊಳ್ಳುವ ಹಾಗೂ ಸಾಮರ್ಥ್ಯವನ್ನು ಸುಧಾರಿಸುವ ಗುರಿಯೊಂದಿಗೆ ಜುಲೈ 1, 2024 ರಂದು ಹೊಸ ಕ್ರಿಮಿನಲ್ ಕಾನೂನುಗಳನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ. ಸಂಘಟಿತ ಅಪರಾಧ, ಸೈಬರ್ ಅಪರಾಧ ಮತ್ತು ವಿವಿಧ ಅಪರಾಧಗಳ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತಹ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸಲು ಹೊಸ ಚೌಕಟ್ಟುಗಳನ್ನು ಪರಿಚಯಿಸುವುದರೊಂದಿಗೆ, ಈ ಐತಿಹಾಸಿಕ ಸುಧಾರಣೆಗಳು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತವೆ.

ಇದನ್ನೂ ಓದಿ : CPI (M)ಗೆ ಮತ್ತೊಂದು ಆಘಾತ; ಬಿಜೆಪಿ ಸೇರಿದ ಮಧು ಮುಲ್ಲಸ್ಸೆರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.