ETV Bharat / state

ಪೇಜಾವರ ಶ್ರೀ ಮತ್ತು ಅವರ ಔನ್ನತ್ಯ... - pejavara Shri death news

ಪೇಜಾವರ ಶ್ರೀಗಳು ತಮ್ಮ ಸಾಮಾಜಿಕ ಕಾರ್ಯಗಳಿಂದ ದೇಶಾದ್ಯಂತ ಮನೆ ಮಾತಾಗಿದ್ದರು. ರಾಮಮಂದಿರ ವಿಷಯ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ತಮ್ಮದೇ ವಿಚಾರ ಮಂಡಿಸಿ ಪ್ರಸಿದ್ಧರಾಗಿದ್ದರು. ಇವರು ನಡೆದು ಬಂದ ಹಾದಿಯ ಬಗ್ಗೆ ಇಲ್ಲಿದೆ ವರದಿ.

ಪೇಜಾವರ ಶ್ರೀ ಮತ್ತು ಅವರ ಔನ್ನತ್ಯ, here is the profile of Pejavara Shri
ಪೇಜಾವರ ಶ್ರೀ ಮತ್ತು ಅವರ ಔನ್ನತ್ಯ
author img

By

Published : Dec 29, 2019, 9:55 AM IST

ಉಡುಪಿ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀಗಳು ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಪೇಜಾವರ ಶ್ರೀಗಳು ತಮ್ಮ ಸಾಮಾಜಿಕ ಕಾರ್ಯಗಳಿಂದ ದೇಶಾದ್ಯಂತ ಮನೆ ಮಾತಾಗಿದ್ದರು. ರಾಮಮಂದಿರ ವಿಷಯ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ತಮ್ಮದೇ ವಿಚಾರ ಮಂಡಿಸಿ ಪ್ರಸಿದ್ಧರಾಗಿದ್ದರು.

ಉಮಾಭಾರತಿ, ಅಡ್ವಾಣಿ, ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯ ಶಿಷ್ಯ ಬಳಗವನ್ನ ಹೊಂದಿರುವ ಪೇಜಾವರ ಶ್ರೀಗಳು ಇಂದು ನಮ್ಮವರನ್ನೆಲ್ಲ ಬಿಟ್ಟು ಹೋಗಿದ್ದಾರೆ. ಹೀಗೆ ಹೈ ಪ್ರೊಫೈಲ್​ ಸ್ವಾಮೀಜಿ ಎನಿಸಿಕೊಂಡಿದ್ದ ಪೇಜಾವರ ಶ್ರೀಗಳು, ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಹಳ್ಳಿಯಲ್ಲಿ ಜನಿಸಿದ್ದರು. ಅದು ಅಂತಿಂಥ ಸ್ಥಳವಲ್ಲ, ಆಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ. ಹೆಸರು ರಾಮಕುಂಜ. ಬಹಳ ಜನಕ್ಕೆ ಈ ಹೆಸರು ಕೇಳಿಯೇ ಗೊತ್ತಿಲ್ಲ. ಅಂಥ ಅಜ್ಞಾತವಾದದ್ದು ಈ ಕುಗ್ರಾಮ. ಇಂಥ ಹಳ್ಳಿಯಲ್ಲಿ 1931 ಏಪ್ರಿಲ್27 ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದ್ದರು.

Pejavara Shri profile
ಬಾಲ್ಯದಲ್ಲಿ ಪೇಜಾವರ ಶ್ರೀಗಳು

ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡು ಮಗುವಿಗೆ ‘ವೆಂಕಟರಮಣ’ ಎಂದು ಹೆಸರಿಟ್ಟದ್ದರು ನಾರಾಯಣಚಾರ್ಯ, ಕಮಲಮ್ಮ ದಂಪತಿ. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣನ ಶುಭ ಮುಹೂರ್ತದಲ್ಲಿ ಪೇಜಾವರರ ಜನನವಾಗುತ್ತೆ. ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದ ಶ್ರೀಪಾದರು, ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ ಮಾಡಿಕೊಂಡರು. ವಿಶೇಷ ಎಂದರೆ, ವೇದಮಾತೆ ವಟುವಿನ ತುಟಿಯಲ್ಲಿ ನಲಿದಳು ಎಂದರೆ ತಪ್ಪಾಗಲಕ್ಕಿಲ್ಲ.

ಉಪನಯನಕ್ಕೂ ಮುಂಚೆ, ಹುಡುಗನಿಗಿನ್ನೂ ಆರು ವರ್ಷ. ಆಟವಾಡುವ ವಯಸ್ಸು. ತಂದೆ – ತಾಯಿ ಮಗನನ್ನು ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ, ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು ಅಂತರಂಗದ ಸೆಳೆತ, ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೇ? ಎಂದು ಮನಸಿನಲ್ಲಿ ಅಂದುಕೊಂಡರು. ಅಷ್ಟರಲ್ಲೇ ತಂದೆ–ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದೊಯ್ದರು. ವೆಂಕಟರಮಣ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು. ‘ನೀನು ನನ್ನಂತೆ ಸ್ವಾಮಿಯಾಗುತ್ತಿಯಾ?’. ವೆಂಕಟರಮಣ ಉತ್ತರಿಸಿದ: “ಹ್ಞೂ, ಆಗುತ್ತೇನೆ” ಈ ಆಕಸ್ಮಿಕ ಸಂಭಾಷಣೆಗೆ ಒಳಗಿನಿಂದ ಪ್ರಾರ್ಥಿಸಿದ ಮೇಲೆ ನಿಂತ ದೇವತೆಗಳು ‘ತಥಾಸ್ತು’ ಎಂದರಂತೆ...

ಹಂಪಿಯ ಅಂಗಳದಲ್ಲಿ ಯತಿಯಾಗಿ ದೀಕ್ಷೆ!

ಇನ್ನು ಪರ್ಯಾಯದ ಅವಧಿ ಮುಗಿಯಿತು. ಆಗ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರಕ್ಕೆ ಹೊರಟರು. ಪಯಣದ ಹಾದಿಯಲ್ಲಿ ಹಂಪಿಯನ್ನು ತಲುಪಿದರು. ವ್ಯಾಸತೀರ್ಥರ ತಪೋಭೂಮಿಯಾದ ಹಂಪಿಯಲ್ಲಿ ಅವರ ನಿರ್ಧಾರ ಗಟ್ಟಿಗೊಂಡಿತು. ಅವರು ವಿಳಂಬ ಮಾಡದೆ ವೆಂಕಟರಮಣನನ್ನು ಕರೆಸಿಕೊಂಡರು. ಆಗಷ್ಟೇ ಉಪನೀತನಾಗಿದ್ದ ವಟು ವೆಂಕಟರಮಣ ಹಿರಿಯರ ಜತೆ ಹಂಪಿಗೆ ತೆರಳಿದರಂತೆ.

ವೆಂಕಟರಮಣ ವಿಶ್ವೇಶ ತೀರ್ಥರಾಗಿದ್ದು ಹೇಗೆ?

ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (3.12.1938) ವೆಂಕಟರಮಣನಿಗೆ ಹಂಪಿಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು. ರಾಮಕುಂಜದ ಪುಟ್ಟ ಹಳ್ಳಿಯ ಮುಗ್ಧ ಬಾಲಕ, ಇನ್ನೂ ಏಳರ ಬಾಲ್ಯದ ಹಸುಳೆ, ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದರು. ಈ ಮೂಲಕ ವೆಂಕಟರಾಮ ‘ವಿಶ್ವೇಶ ತೀರ್ಥ’ರಾದರು.

Pejavara Shri profile
ಬಾಲ್ಯದಲ್ಲೇ ಕ್ರಾಂತಿಕಾರಿ ಹೆಜ್ಜೆ

ಬಾಲ್ಯದಲ್ಲೇ ಕ್ರಾಂತಿಕಾರಿ ಹೆಜ್ಜೆ...

ಶ್ರೀಪಾದರನ್ನು ಬಾಲ್ಯದಿಂದ ಕಾಡುತ್ತಿದ್ದ ಸಮಸ್ಯೆ ಎಂದರೆ ಅದು ಅಸ್ಪೃಶ್ಯತೆ. ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು ಸಿಡಿದೇಳುತ್ತಲೇ ಇತ್ತು.

ಈ ಸಂದರ್ಭದಲ್ಲಿಯೇ ಗಾಂಧೀಜಿಯ ವಿಚಾರಧಾರೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿತ್ತಂತೆ. ಅಂದಿನಿಂದ, ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ವಿಶ್ವೇಶ ತೀರ್ಥರು ತೊರೆದರು. ಅಷ್ಟೇ ಅಲ್ಲ ಶುದ್ಧ ಖಾದಿಧಾರಿಯಾಗುವ ದೀಕ್ಷೆಯನ್ನೂ ತೊಟ್ಟರು.

ಸ್ವಾಮೀಜಿಗಳಿಗೆ ಪ್ರತ್ಯೇಕ ಅಡುಗೆ ಪದ್ಧತಿಯೇ ರದ್ದು!

ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು. ಎಲ್ಲರಿಗೂ ಬಡಿಸುವ ಅಡುಗೆಯನ್ನೇ ತಾವೂ ಉಂಡರು. ವೈಭವದ ಉತ್ತುಂಗ ಸ್ಥಿತಿಯಲ್ಲಿ ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು. ಜಾತಿಯ ಬಗ್ಗೆ ಆಚಾರ್ಯ ಮಧ್ವರ ಹೇಳಿಕೆ ಅವರಲ್ಲಿ ಕ್ರಾಂತಿಯ ಕಿಡಿಯನ್ನು ಮೂಡಿಸಿತು. 13ನೆಯ ಶತಮಾನದಷ್ಟು ಹಿಂದೆಯೇ ಅಚಾರ್ಯ ಮಧ್ವರು ಸಾರಿದ್ದರು.

40 ವರ್ಷಗಳ ಹಿಂದೆಯೇ ಹರಿಜನ ಕೇರಿಗೆ ವಿಶ್ವೇಶರು...

40 ವರ್ಷಗಳ ಹಿಂದೆ ಶ್ರೀಪಾದರು ಮೊದಲು ಹರಿಜನ ಕೇರಿಗೆ ಹೋದಾಗ ಬಂದ ಟೀಕೆಗಳಿಗೆ ನೊಂದ ಶ್ರೀಪಾದರು ಅಂದು ನನ್ನ ಬಳಿ ಹೇಳಿಕೊಂಡದ್ದು, ಈಗಲೂ ನನ್ನ ಕಿವಿಯಲ್ಲಿ ರಣರಣಿಸುತ್ತಿದೆ ಎನ್ನುತ್ತಾರೆ ಆಚಾರ್ಯ ಬನ್ನಂಜೆ ಗೋವಿಂದಾಚಾರ್ಯರು –

“ತಪ್ಪು ಅರ್ಥ ಹಚ್ಚಿ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಲಾಗುತ್ತಿದೆ. ಇದರಿಂದ ನನಗೆ ತುಂಬಾ ನೋವಾಗಿದೆ. ಇದು ಹೀಗೆಯೇ ಮುಂದುವರಿದರ ನಾನು ಪೀಠ ತ್ಯಾಗ ಮಾಡಿ, ಬಿಡಿ ಸನ್ಯಾಸಿಯಾಗಿ ಬದುಕುತ್ತೇನೆ. ಹರಿದ್ವಾರದಲ್ಲೋ ಹೃಷಿಕೇಶದಲ್ಲೋ ಒಂದು ಪುಟ್ಟ ಗುಡಿಸಲು ಕಟ್ಟಿಕೊಂಡು ಇದ್ದು ಬಿಡುತ್ತೇನೆ.” ಆದರೆ ಹಾಗಾಗಲಿಲ್ಲ. ಶೀಪಾದರ ಪ್ರೀತಿಯ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರೆ ಅವರನ್ನು ಕರೆಸಿಕೊಂಡರು. ‘ನೀವು ಮಾಡಿದ ಕೆಲಸ ಶಾಸ್ತ್ರೀಯವಾಗಿದೆ. ದಲಿತರಿಗೂ ಹರಿಭಕ್ತಿಯ ಸಂದೇಶ ನೀಡಿದಿರಿ. ಇದು ಪುಣ್ಯದ ಕೆಲಸ’ ಎಂದು ಪ್ರೀತಿಯಿಂದ ಹರಸಿ ಸಂತೈಸಿದರು.

ಆಗಿನ್ನು ವಿಶ್ವೇಶ ತೀರ್ಥರಿಗೆ 20 ಹರೆಯ:

ಆಗ ಪೇಜಾವರ ಶ್ರೀಪಾದರಿಗೆ, 20ರ ಹರೆಯ. 1951ರಲ್ಲಿ ನಂಜನಗೂಡಿನಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನ ನಡೆಯಿತು. ಎಲ್ಲ ಪಂಡಿತರ ಒಮ್ಮತದಿಂದ ಆ ಸಮ್ಮೇಳನದ ಅಧ್ಯಕ್ಷತೆಯ ಹೊಣೆಯನ್ನು ವಿಶ್ವೇಶ ತೀರ್ಥರಿಗೆ ಒಪ್ಪಿಸಿದ್ದರು. ಆ ಸಭೆಯಲ್ಲಿ ಆಗಣ ಮೈಸೂರು ಅರಸರಾಗಿದ್ದ ದಿ. ಜಯಚಾಮರಾಜೇಂದ್ರ ಒಡೆಯರು ಉಪಸ್ಥಿತರಿದ್ದರು. ತರುಣ ಯತಿಯ ತೇಜಸ್ವಿತೆಗೆ, ಪಾಂಡಿತ್ಯಕ್ಕೆ ಮೆಚ್ಚಿದ ಒಡೆಯರು ಶ್ರೀಪಾದರನ್ನು ಅರಮನೆಗೆ ಕರೆಸಿ ಪೂಜೆ ಮಾಡಿಸಿದರು.

1952 ಜನವರಿ 18ರಂದು, 21ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ ನಡೆಯಿತು. ಅಲ್ಲಿ ಅನ್ನದಾನ ಜ್ಞಾನದಾನಗಳಲ್ಲಿ ಸಾಟಿಯಿಲ್ಲದ ಪರ್ಯಾಯವದು. ಪರ್ಯಾಯದ ಅವಧಿಯಲ್ಲೇ ಮಾಧ್ವರೆಲ್ಲರ ಸಂಘಟನೆಗೆ ನಾಂದಿ ಹಾಡಿದ ಮಾಧ್ವ ತತ್ವಜ್ಞಾನ ಸಮ್ಮೇಳನ ನಡೆಯಿತು.

1968 ಜನವರಿ 18ರಿಂದ, 1970 ಜನವರಿ 17ರ ವರೆಗೆ ಎರಡನೆಯ ಶ್ರೀಕೃಷ್ಣ ಪೂಜಾ ಪರ್ಯಾಯದ ನೇತೃತ್ವ ವಹಿಸಿದರು. ಮೊದಲ ಪರ್ಯಾಯವನ್ನೂ ಮೀರಿ 2ನೇ ಪರ್ಯಾಯವನ್ನ ನಡೆಸಿಕೊಟ್ಟ ಹೆಮ್ಮೆ ಪೇಜಾವರರ ಪಾಲಿಗಿದೆ. ಈ ಅವಧಿಯಲ್ಲೇ, ಪರ್ಯಾಯೋತ್ಸವದ ಸಂಭ್ರಮದಲ್ಲೇ, ಶ್ರೀಪಾದರು ಗೀತೆಯ ಕುರಿತು ನೀಡಿದ ಉಪನ್ಯಾಸ ಮಾಲಿಕೆ ಪುಸ್ತಕ ರೂಪದಲ್ಲಿ ಮೂಡಿ ಬಂತು. ಅದುವೇ ‘ಗೀತಾ ಸಾರೋದ್ಧಾರ.

ಈ ಪರ್ಯಾಯದ ಅವಧಿಯಲ್ಲೇ 1968 ಆಗಸ್ಟ್ 18ರಂದು ಉಡುಪಿಯಲ್ಲಿ, ಕೃಷ್ಣನ ಸನ್ನಿಧಿಯಲ್ಲಿ, ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ಉದ್ಘಾಟನೆ ಮಾಡಲಾಯಿತು. ಈ ಮೂಲಕ ಬಡರೋಗಿಗಳಿಗೆ ಅನುಕೂಲ ಮಾಡಿಕೊಡಲಾಯಿತು. ಇದು ಶ್ರೀಪಾದರ ಸಾಮಾಜಿಕ ಕಳಕಳಿಗೊಂದು ಅನನ್ಯ ನಿದರ್ಶನ. ಈ ಅವಧಿಯಲ್ಲೇ ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ ಸಹ ನಡೆಯಿತು. ಜನಸಾಗರವವೇ ಉಡುಪಿಯತ್ತ ಹರಿದುಬಂತು. ‘ಹಿಂದೂಗಳೆಲ್ಲ ಒಂದಾಗಿ ಬಂಧುಭಾವದಿಂದ ಬದುಕಬೇಕು’ ಎಂಬ ಸಂದೇಶವನ್ನು ಶ್ರೀಪಾದರು ಈ ವೇದಿಕೆಯಲ್ಲಿ ನೀಡಿದ್ದರು. ಹೀಗೆ ಹಿಂದೂ ಸಮಾಜದ ಉದ್ಧಾರಕ್ಕೆ ವಿಶ್ವೇಶ ತೀರ್ಥರು ಕಟಿ ಬದ್ಧರಾಗಿ ದೇಶಾದ್ಯಂತ ಜನಾನುರಾಗಿಯಾಗಿದ್ದರು.

Intro:Body:

Pejavara Shri profile

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.