ಉಡುಪಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, 24 ಗಂಟೆಯಲ್ಲಿ 112 ಮಿಲಿಮೀಟರ್ ಮಳೆಯಾಗಿದೆ ಎಂದು ಉಡುಪಿ ಜಿಲ್ಲಾ ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.
![heavy rain in udupi](https://etvbharatimages.akamaized.net/etvbharat/prod-images/kn-udp-01-10-rain-updates-7202200-avjpg_10082020082415_1008f_1597028055_1022.jpg)
ಉಡುಪಿ ತಾಲೂಕಿನಲ್ಲಿ 118 ಮಿ.ಮೀ, ಕುಂದಾಪುರ 108, ಕಾರ್ಕಳದಲ್ಲಿ 102 ಮಿಲಿಮೀಟರ್ ಮಳೆಯಾಗಿದ್ದು, ಉಡುಪಿ ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಣೆ ಮುಂದುವರೆದಿದೆ.
![heavy rain in udupi](https://etvbharatimages.akamaized.net/etvbharat/prod-images/kn-udp-01-10-rain-updates-7202200-avjpg_10082020082415_1008f_1597028055_919.jpg)
ಜಿಲ್ಲಾದ್ಯಂತ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಬ್ರಹ್ಮಾವರ ತಾಲೂಕಿನ ಕೋಟ, ಕೋಟತಟ್ಟು, ಚಿತ್ರಪಾಡಿ, ಮಟಪಾಡಿ, ಪಾರಂಪಳ್ಳಿ ಪ್ರದೇಶಗಳು ನೆರೆಯಿಂದ ಆವೃತಗೊಂಡಿದ್ದು, ಜನರನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ಶ್ರಮಿಸುತ್ತಿದೆ.